ದಾಂಡೇಲಿ: ದಾಂಡೇಲಿ ವೆಸ್ಟ್ ಕೋಸ್ಟ್ ಪೇಪರ್ ಮಿಲ್ ನ ಮಾಹಿತಿ ತಂತ್ರಜ್ಞಾನ ವಿಭಾಗದ ಹಿರಿಯ ಅಧಿಕಾರಿ ಎಮ್. ಹರಿದಾಸನ್ (60) ಹೃದಯಾಘಾತದಿಂದ ಬುಧವಾರ ಕೊನೆಯುಸಿರೆಳೆದರು.
ಮೂಲತಃ ಕೇರಳದವರಾಗಿರುವ ಹರಿದಾಸನ್ ಕಾಗದ ಕಂಪನಿಯಲ್ಲಿ ಹಲವಾರು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದರು. ನಗರದ ಅಯ್ಯಪ್ಪ ಸೇವಾ ಸಮಿತಿಯ ಕಾರ್ಯದರ್ಶಿಯಾಗಿ ಪ್ರಾಮಾಣಿಕ ಸೇವೆ ನೀಡುತ್ತಿದ್ದರು. ಸಮಾಜಮುಖಿ ಕಾರ್ಯಗಳಲ್ಲಿ ಭಾಗವಹಿಸುತ್ತಿದ್ದರು.
ಮೃತರು ಮಡದಿ, ಇಬ್ಬರು ಮಕ್ಕಳನ್ನು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಸಂತಾಪ : ಹರಿದಾಸನ್ ನಿಧನಕ್ಕೆ ಕಾಗದ ಕಂಪನಿಯ ಕಾರ್ಯನಿರ್ವಾಹಕ ನಿರ್ದೇಶಕ ರಾಜೇಂದ್ರ ಜೈನ್, ಮಾನವ ಸಂಪನ್ಮೂಲ ವಿಭಾಗದ ಉಪಾಧ್ಯಕ್ಷ ಎಸ್. ಎನ್. ಪಾಟೀಲ, ಸಾರ್ವಜನಿಕ ಸಂಪರ್ಕ ಅಧಿಕಾರಿಗಳಾದ ಕೆ. ಜಿ. ಗಿರಿರಾಜ, ರಾಜೇಶ ತಿವಾರಿ, ಅಯ್ಯಪ್ಪ ಸೇವಾ ಸಂಸ್ಥೆಯ ಹಾಗೂ ಕೇರಳ ಸಮಾಜದ ಅಧ್ಯಕ್ಷ ಟಿ. ಆರ್. ಚಂದ್ರಶೇಖರ, ನ್ಯಾಯವಾದಿ ಎಸ್. ಸೋಮಕುಮಾರ ಹಾಗೂ ಗಣ್ಯರನೇಕರು ಸಂತಾಪ ವ್ಯಕ್ತಪಡಿಸಿದ್ದಾರೆ.