ದಾಂಡೇಲಿ: ನಗರದ ಹಿರಿಯ ಮೀನು ವ್ಯಾಪಾರಿ ಅಗ್ನೆಲ್ ಡಿಸೆಲ್ವಾರವರು ( 81) ವಯೋಸಹಜ ಕಾರಣದಿಂದ ಕೊನೆಯುಸಿರೆಳೆರದಿದ್ದಾರೆ.
ಇವರು ಬಹಳ ವರ್ಷಗಳಿಂದ ನಗರದ ಸಂಡೇ ಮಾರ್ಕೆಟ್‍ನಲ್ಲಿ ಮೀನು ವ್ಯಾಪಾರ ಮಾಡಿಕೊಂಡಿದ್ದರು. ಸರಳ ಸಜ್ಜನಿಕೆಯ ವ್ಯಕ್ತಿತ್ವದವರಾಗಿದ್ದ ಇವರು ಎಲ್ಲರ ಪ್ರೀತಿ ಗಳಿಸಿದ್ದರು.
ಮೃತರು ಮಡದಿ ಹಾಗೂ ಇಬ್ಬರು ಪುತ್ರು ಹಾಗೂ ನಾಲ್ವರು ಪುತ್ರಿಯರನ್ನು ಅಗಲಿದ್ದಾರೆ. ಇವರ ಅಗಲುವಿಕೆಗೆ ಸಂಡೇ ಮಾರ್ಕೆಟ್‍ನ ಮೀನು ಮಾಂಸ ವ್ಯಾಪಾರಿಗಳ ಸಂಘಟನೆಯ ಪದಿಕಾರಿಗಳು ಹಾಗೂ ನಗರದ ಗಣ್ಯರನೇಕರು ಸಂತಾಪ ಸೂಚಿಸಿದ್ದಾರೆ.