ದಾಂಡೇಲಿ: ಅಧಿಕಾರ ವಿಕೇಂದ್ರೀಕರಣ ಮತ್ತು ಮೀಸಲಾತಿ ನೀತಿಯಿಂದಾಗಿ ಸಮಾನ್ಯ ಜನರೂ ಕೂಡಾ ಆಡಳಿತದ ಚುಕ್ಕಣಿ ಹಿಡಿಯಬಹುದೆಂಬುದಕ್ಕೆ ದಾಂಡೇಲಿ ನಗರಸಭೆಯ ನೂತನ ಅದ್ಯಕ್ಷರಾಗಿ ಆಯ್ಕೆಯಾಗಿರುವ ಸರಸ್ವತಿ ರಜಪೂತರವರೇ ಒಂದು ತಾಜಾ ನಿದರ್ಶನ.
ಒಂದು ಕಾಲದಲ್ಲಿ ಸಾಕ್ಷರತಾ ಸಂಯೋಜಕಿಯಾಗಿ, ನೊಡೆಲ್ ಅಧಿಕಾರಿಯಾಗಿ, ಟ್ಯೂಶನ್ ಶಿಕ್ಷಕಿಯಾಗಿ ಕಾರ್ಯ ನಿವೃಹಿಸಿದ್ದ ಸರಸ್ವತಿ ಇಂದು ದಾಂಡೇಲಿ ನಗರಸಭಾ ಅಧ್ಯಕ್ಷತೆಯ ಗದ್ದುಗೆಯೇರಿದ್ದಾರೆ. ಆ ಮೂಲಕ ರಾಜಕೀಯದಲ್ಲಿಯೂ ಸಹ ಪ್ರಾಮಾಣಿಕತೆ ಮತ್ತು ನಿಷ್ಠೆಯ ಕೆಲಸ, ಹಾಗೂ ನಿಸ್ವಾರ್ಥ ಜನಸೇವೆ ಮಾಡಿದರೆ ಕೊನೆಗೊಂದು ದಿನ ಗೌರವ ಒಲಿದೇ ಒಲಿಯುತ್ತದೆ ಎಂದು ಹೇಳಬಹುದಾಗಿದೆ.
ಮೂಲತಃ ದಾರವಾಡದ (ತವರುಮನೆ)ಯವರಾಗಿರುವ ಸರಸ್ವತಿ ಸವಣೂರಿಗೆ ಮದುವೆಯಾಗಿ ಹೋದವರು. ಎಲ್ಲಿಂದೆಲ್ಲಿಯ ನಂಟೋ ನೋಡಿ. ಅವರ ಪತಿ ದಾಂಡೇಲಿಯ ವೇಸ್ಟ್ಕೋಸ್ಟ್ ಕಾಗದ ಕಾರ್ಖನೆಯಲ್ಲಿ ಉದ್ಯೋಗಿಯಾಗಿ ಬಂದ ಮೇಲೆ ಅವರು ದಾಂಡೇಲಿಗಾಗಮಿಸಿ ಬದುಕು ಕಂಡುಕೊAಡವರು. ಪತಿ ಕಂಪನಿಯ ಉದ್ಯೋಗಿಯಾಗಿದ್ದು ಇವರ ಸಮಾಜ ಸೇವಾ ಕಾರ್ಯಕ್ಕೆ ಬೆಂಬಲಿಸುತ್ತಿದ್ದರು. ಈ ನಡುವೆ ಸಮಾಜ ಸೇವೆಗೆ ಬೆನ್ನೆಲುಬಾಗಿದ್ದ ಪತಿಯ ಅಗಲುವಿಕೆ. ಮಕ್ಕಳಿಲ್ಲದ ನೋವು. ಇದರ ನಡುವೆಯೂ ಅವರು ನೆಮ್ಮದಿಯ ಬದುಕು ಕಂಡುಕೊAಡಿದ್ದು ಜನ ಸೇವೆಯಲ್ಲಿ.
ಬಿ.ಎ. ಪದವೀಧರೆಯಾಗಿರುವ ಸರಸ್ವತಿಯವರು ಒಂದು ಕಾಲದಲ್ಲಿ ದಾಂಡೇಲಿಯ ಹಳಿಯಾಳ ರಸ್ತೆಯ ತನ್ನ ಮನೆಯಲ್ಲಿ ಕೇವಲ ೫ ರೂ. ಶುಲ್ಕ ಪಡೆದು ಬಡ ಮಕ್ಕಳಿಗೆ ಟ್ಯೂಶನ್ ಕ್ಲಾಸ್ ನಡೆಸಿದ್ದರು. ನಂತರ ಸಾಕ್ಷರತಾ ಅಭಿಯಾನದಲ್ಲಿ ಸಕ್ರೀಯರಾಗಿ ತೊಡಗಿಸಿಕೊಂಡರು. ಸಾಕ್ಷರತಾ ಸಂಯೋಜಕಿಯಾಗಿ, ನೊಡೆಲ್ ಅಧಿಕಾರಿಯಾಗಿ ೯ ಸಾಕ್ಷರತಾ ಕೇಂದ್ರಗಳನ್ನು ಮುನ್ನಡೆಸಿದವರು. ಸ್ವರ್ಣ ಜಯಂತಿ ರೋಜಗಾರ ಯೋಜನೆಯ ಸ್ವ ಸಹಾಯ ಸಂಘಗಳ ಒಕ್ಕೂಟದ (ಎಸ್.ಜಿ.ಆರ್.ವೈ) ಅಧ್ಯಕ್ಷಯೆಯಾಗಿ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಿದವರು.
ಇವೆಲ್ಲದದಕ್ಕಿಂತ ಹೆಚ್ಚಾಗಿ ಇವರು ಅಧಿಕಾರದಲ್ಲಿರಲಿ ಬಿಡಲಿ ಸದಾ ಸರಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವ ಕೆಲಸ ಮಾಡುತ್ತಿದ್ದವರು. ರೇಶನ್ ಕಾರ್ಡ, ಆಧಾರ ಕಾರ್ಡ, ವಿಧವಾ ವೇತನ, ವೃದ್ದಾಪ್ಯ ವೇತನ, ಅಂಗವಿಕಲ ವೇತನ ಸೇರಿದಂತೆ ಹಲವಾರು ಕೆಲಸಗಳನ್ನು ಜನರಿಗೆ ಮಾಡಿಸಿಕೊಡುತ್ತಿದ್ದ ಇವರು ಆ ಮೂಲಕ ಜನರಿಗೆ ಹತ್ತಿವಾದವರು
ಹಿಂದೂ ರಜಪೂತ ಸಮಾಜಕ್ಕೆ ಸೇರಿದ ಸರಸ್ವತಿ ರಜಪೂತ ೧೯೯೫ ರಲ್ಲಿ ಜನತಾದಳ ಪಕ್ಷದಿಂದ ಸ್ಪರ್ದಿಸಿ ಮೊದಲ ಬಾರಿ ನಗರಸಭಾ ಸದಸ್ಯೆಯಾಗಿ ಆಯ್ಕೆಯಾಗಿದ್ದವರು. ೨೦೧೩ ರಲ್ಲಿ ಸ್ಪರ್ದಿಸಿ ಪರಾಭವಗೊಂಡಿದ್ದರಾರೂ ಇವರ ಜನಪರ ಕಾರ್ಯಳನ್ನು ಕಂಡ ಆರ್.ವಿ. ದೇಶಪಾಂಡೆಯವರು ಇವರನ್ನು ನಾಮನಿರ್ದೇಶಿತ ಸದಸ್ಯೆಯನ್ನಾಗಿ ನೇಮಕ ಮಾಡಿದ್ದರು. ೨೦೧೮ರ ಚುನಾವಣೆಯಲ್ಲಿ ವಾರ್ಡ ನಂಭರ ೩೦ ರಲ್ಲಿ (ಹಳಿಯಾಳ ರಸ್ತೆ) ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ದಿಸಿ ಗೆದ್ದು ಬಂದವರು. ಇವರು ಸ್ಪರ್ದಿಸಿ ಗೆದ್ದು ಬಂದಿರುವ ವಾರ್ಡ ಬಹುತೇಕ ಸ್ಲಂ ಏರಿಯಾ ಎಂಬುದು ಗಮನಾರ್ಹವಾಗಿದ್ದು, ಈ ಪ್ರದೇಶದಲ್ಲಿ ಇವರು ಸದಾ ಜನಸೇವೆಯಲ್ಲಿ ತೊಡಗಿಸಿಕೊಂಡಿದ್ದೇ ಇವರ ಗೆಲುವಿಗೆ ಕಾರಣವಾಗಿತ್ತೆಂಬುದೂ ಉಲ್ಲೇಖಾರ್ಹ.
ಬಡತನ ಮತ್ತು ಶ್ರಮ ಜೀವನದ ಅರಿವಿರುವ ಸರಸ್ವತಿ ರಜಪೂತರವರು ಶಾಸಕ ಆರ್.ವಿ. ದೇಶಪಾಂಡೆಯವರೇ ಹೇಳಿದ ಹಾಗೆ ಕೈ, ಬಾಯಿ ಸ್ವಚ್ಚ ಇಟ್ಟುಕೊಂಡವರು. ಇಂತಹ ಪ್ರಾಮಾಣಿಕ ಹಾಗೂ ಕ್ರಿಯಾಶೀಲ ಮಹಿಳೆಗೆ ದಾಂಡೇಲಿ ನಗರದ ಪ್ರಥಮ ಪ್ರಜೆ ಎಂಬ ಗೌರವ ಒಲಿದಿರುವುದು ಅಭಿಮಾನದ ಸಂಗತಿಯೇ ಆಗಿದ್ದು, ಎರಡು ಬಾರಿ ಚುನಾಯಿತ ಸದಸ್ಯೆಯಾಗಿ, ಒಮ್ಮೆ ನಾಮನಿರ್ದೇಶಿತ ಸದಸ್ಯೆ ಅನುಭವವಿರುವ ಸರಸ್ವತಿಯ ಸಾರಥ್ಯದಲ್ಲಿ ನಗರಸಭೆಯ ಆಡಳಿತ ಯಾವರೀತಿ ಮುನ್ನಡೆಯಲಿದೆಯೋ ಕಾದು ನೋಡಬೇಕಿದೆ.