ದಾಂಡೇಲಿಯಲ್ಲಿ ಶನಿವಾರ ತುಸು ಸಮಾಧಾನ ತಂದಿದ್ದ ಕೊರೊನಾ ರವಿವಾರ ಮತ್ತೆ 16 ಪ್ರಕರಣಗಳಾಗುವ ಮೂಲಕ ಏರಿಕೆಯಾಗಿದೆ.
ಕೊರೊನಾ ಇದಿಗ ನಗರದಿಂದಾಚೆ ತಾಲೂಕಿನ ಬೊಮ್ನಳ್ಳಿಯವರೆಗೂ ವ್ಯಾಪಿಸಿದೆ. ಗಾಂಧಿನಗರ, ಕೋಗೊಲಬನ, ಕಾಗದ ಕಂಪನಿ ಸೇರಿದಂತೆ ಹಲವೆಡೆಯ ಜನರು ಸೋಂಕಿಗೊಳಗಾಗಿದ್ದಾರೆ.
ಶನಿವಾರ ಗುಣಮುಖರಾದ 12 ಜನರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಇಲ್ಲಿಯವರವಗೆ ಒಟ್ಟೂ 762 ಪ್ರಕರಣಗಳಾಗಿದ್ದು ಅವರಲ್ಲಿ 563 ಜನರು ಗುಣಮುಖರಾಗಿದ್ದಾರೆ.