ದಾಂಡೇಲಿಯಲ್ಲಿ ಶುಕ್ರವಾರ ಮತ್ತೆ 11 ಜನರಲ್ಲಿ ಕೊರೊನಾ ಸೋಂಕು ದೃಢವಾಗಿದೆ. ಸೋಂಕಿತರನ್ನು ಕೋವಿಡ್ ಕೇರ್ ಸೆಂಟರ್ ಗೆ ದಾಖಲಿಸಲಾಗಿದೆ.
ಶುಕ್ರವಾರ ಟೌನ್ ಶಿಪ್, ಹಳಿಯಾಳ ರಸ್ತೆ , ಕೆ.ಪಿ.ಸಿ ಕಾಲನಿ ಸೇರಿದಂತೆ ವಿವಿದೆಡೆಯ ಜನರು ಸೋಂಕಿಗೊಳಗಾಗಿದ್ದಾರೆ. ಇಲ್ಲಿಯವರೆಗೆ ಒಟ್ಟೂ 621 ಜನರು ಕೊರೊನಾ ಪಾಸಿಟಿವ್ ಗೆ ಒಳಗಾದಂತಾಗಿದೆ.
ಕಳೆದ ಎರಡು ದಿನಗಳಿಂದ ಕೋವಿಡ್ ಕೇರ್ ಸೆಂಟರ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದವರ ಬಿಡುಗಡೆಯಾಗಿಲ್ಲ. ಶುಕ್ರವಾರ ಕೆಲವರು ಗುಣಮುಖರಾಗಿ ಮನೆ ಸೇರುವ ನಿರೀಕ್ಷೆಯಿದೆ.