ದಾಂಡೇಲಿ: ಅಯೋದ್ಯೆಯಲ್ಲಿ ರಾಮ ಮಂದಿರಕ್ಕೆ ಭೂಮಿ ಪೂಜೆ ನೆವೇರಿಸುವ ಸಂದರ್ಭದ ಭಾಗವಾಗಿ ದಾಂಡೇಲಿಯಲ್ಲಿ ಭಾ.ಜ.ಪ ಯುವ ಮೋರ್ಚಾದವರು 1992 ರಲ್ಲಿ ಕರ ಸೇವೆಯಲ್ಲಿ ಪಾಲ್ಗೊಂಡಿದ್ದ ದಾಂಡೇಲಿಯ ಹಿರಿಯರನ್ನು ಸನ್ಮಾನಿಸಿ ಗೌರವಿಸಿದರು.
ವೀರಾಂಜನೇಯ ದೇವಸ್ಥಾನದ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ 1992ರಲ್ಲಿ ಕರೇವೆಯಲ್ಲಿ ಪಾಲ್ಗೊಂಡಿದ್ದ ದಾಂಡೇಲಿಯ ಅರ್ಜುನ್ ನಾಯ್ಕ, ವಿಠ್ಠಲ್ ಬೈಲೂರಕರ, ಟಿಕಾಸ್ ಮಿಸ್ಕಿನ್, ತುಕಾರಾಮ ಬಡಿಗೇರ, ಲಿಂಗರಾಜ ಎಚ್ ರವರನುಲ್ಶಾಲು ಹೊದಿಸಿ ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಕರ ಸೇವಕರಾದ ಅರ್ಜುನ್ ನಾಯ್ಕ ಮುಂತಾದವರು ಮಾತನಾಡಿ ಅಂದು ತಾವು ಕರಸೇವೆಯಲ್ಲಿ ಪಾಲ್ಗೊಂಡ ಅಪೂರ್ವದ ಕ್ಷಣಗಳನ್ನು ನೆನಪಿಸಿಕೊಂಡರು. ಅದರ ಭಾಗವಾಗಿ ಇಂದು ಅಯೋದ್ಯೆಯಲ್ಲಿ ರಾಮ ಮಂದಿರ ನಿರ್ಮಣಗೊಳ್ಳುತ್ತಿರುವುದು ಸಂತಸದ ಸಗತಿಯಾಗಿದೆ ಎಂದರು.
ಭಾ.ಜ.ಪ ಜಿಲ್ಲಾ ಯುವ ಮೋರ್ಚಾ ಉಪಾಧ್ಯಕ್ಷ ಸುಧೀರ ಶೆಟ್ಟಿ ಮಾತನಾಡಿ ಅಯೋದ್ಯೆಯಲ್ಲಿ ರಾಮಮಂದಿರ ನಿಮಾರ್ಣ ಇದು ನಮ್ಮೆಲ್ಲ ರಾಷ್ಟ್ರ ಪ್ರೇಮಿಗಳ ಬಹುವರ್ಷಗಳ ಕನಸಾಗಿದೆ. ಅದು ಇಂದು ನೆರವೇರುತ್ತಿದೆ. ಈ ಕಾರ್ಯಕ್ಕೆ ಬುನಾದಿ ನೀಡಿದವರು ಕರಸೇವಕರು. ಅವರನ್ನು ಸನ್ಮಾನಿಸಲು ನಮಗೆ ಹೆಮ್ಮೆಯೆನಿಸುತ್ತದೆ ಎಂದರು.
ನಗರ ಯುವಮೋರ್ಚಾ ಅಧ್ಯಕ್ಷ ಈರಯ್ಯ ಸಾಲಿಮಠ ಸ್ವಾಗತಿಸಿ, ವಂದಿಸಿದರು. ಯುವ ಮೋರ್ಚಾ ಜಿಲ್ಲಾ ಸಮಿತಿ ಸದಸ್ಯ ನಿತೀಶ ಕಲಾಲ್, ತಾಲೂಕು ಪದಾಧಿಕಾರಿಗಳಾದ ಪ್ರವೀಣ ಪರಮಾರ, ಪ್ರಭು ಅರವಟಗಿ, ಪವನ ಕೊಣ್ಣೂರ, ವಿನಾಯಕ ರಾಯಬಾಗಕರ, ಉದಯ, ರಾಜೇಶ, ಸಂತೋಷ, ಸುಮೇರ ಜೈನ್ ಮುಂತಾದವರಿದ್ದರು.
ದೇವಸ್ಥಾನಗಳಲ್ಲಿ ಪೂಜೆ
ರಾಮ ಮಂದಿರದ ಭೂಮಿ ಪೂಜೆಯ ಭಾಗವಾಗಿ ನಗರದ ಬಜರಂಗದಳ ಹಾಗೂ ಇತರೆ ಹಿಂದೂ ಸಂಘಟನೆಗಳ ನೇತೃತ್ವದಲ್ಲಿ ನಗರದ ವಿವಿಧ ಹನುಮಾನ ದೇವಸ್ಥಾನ ಹಾಗೂ ರಾಂಮ ಮಂದಿರಗಳಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆದವು. ಕೆಲವರು ಮನೆ ಮನೆಗಳಲ್ಲಿ ವಿಶೇಷ ಪೂಜಾ ಕಾರ್ಯ ಕೈಗೊಂಡರು.