ದಾಂಡೇಲಿಯಲ್ಲಿ ಒಟ್ಟೂ ಕೊರೊನಾ ಸೋಂಕಿತರ ಸಂಖ್ಯೆ 457 ಕ್ಕೆ ಏರಿಕೆಯಾಗಿದ್ದು, ಉತ್ತರ ಕನ್ನಡ ಜಿಲ್ಲೆಯಲ್ಲಿ ದಾಂಡೇಲಿ ಭಟ್ಕಳವನ್ನು ಹಿಂದಿಕ್ಕಿ ಮೊದಲ ಸ್ಥಾನಕ್ಕೆರಿದಂತಾಗಿದೆ. ಇದು ಖುಶಿ ಪಡುವ ಸಂಗತಿಯಂತೂ ಅಲ್ಲ.
ಬುಧವಾರ ದಾಂಡೇಲಿಯಲ್ಲಿ 33 ಜನರಲ್ಲಿ ಕೊರೊನಾ ಸೋಂಕು ದೃಢವಾಗಿದೆ. ಇಲ್ಲಯವರೆಗಿನ ಸೋಂಕಿತರ ಸಂಖ್ಯೆ 458 ಆದಂತಾಗಿದೆ. ಇವರಲ್ಲಿ 300ರಷ್ಟು ಜನ ಗುಣಮುಖರಾಗಿ ಮನೆ ಸೇರಿದ್ದಾರೆ.
ದಾಂಡೇಲಿಯಲ್ಲಿ ಕಳೆದ ಕೆಲ ದಿನಗಳಿಂದ ಹೆಚ್ಚೆಚ್ಚು ರ್ಯಾಪಿಡ್ ಟೆಸ್ಟಗಳನ್ನು ನಡೆಸಲಾಗುತ್ತಿದೆ ಎಂದು ತಿಳಿದು ಬಂದಿದ್ದು ಬುಧವಾರದ ವರದಿಯಲ್ಲಿ ನಗರದ ಕಾಗದ ಕಂಪನಿಯ ಕ್ವಾಟ್ರಸ್, ಹಳೆದಾಂಡೇಲಿ, ಟೌನ್ ಶಿಪ್, ಮಾರುತಿನಗರ ಸೇರಿದಂತೆ ವಿವಿದೆಡೆಯ ಜನರು ಸೊಂಕಿಗೊಳಗಾಗಿದ್ದಾರೆ.