ದಾಂಡೇಲಿಯಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತ ಜನತೆಯ ಆತಂಕಕ್ಕೆ ಕಾರಣವಾಗಿರುವ ಕೊರೊನಾ ವೈರಸ್ ಈ ಭಾನುವಾರ ರಜಾ ಪಡೆದುಕೊಂಡು ವಿಶ್ರಮಿಸಿರುವಂತಿದೆ.
ರವಿವಾರ ಬಂದ ಮಾಹಿತಿಯಂತೆ ದಾಂಡೇಲಿಯಲ್ಲಿ ಇಂದು ಒಂದೇ ಒಂದು ಪಾಸಿಟಿವ್ ಪ್ರಕರಣಗಳು ದಾಖಲಾಗಿಲ್ಲ. ಇದರಿಂದ ಅಧಿಕಾರಿಗಳು ಹಾಗೂ ಸಾರ್ವಜನಿಕರು ಒಂದಿಷ್ಟು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.
ಭಾನುವಾರದ ಲಾಕ್ ಡೌನ್ ಇಲ್ಲ
ಸರಕಾರ ಭಾನುವಾರದ ಲಾಕ್ ಡೌನ್ ತೆರವುಗೊಳಿಸಿ ಆದೇಶಿಸಿದೆ. ಹಾಗೆಂದು ಸಾರ್ವಜನಿಕರು ನಿಯಮ ಮೀರಿ ನಡೆಯುವುದೂ ಸಹ ಸರಿಯಲ್ಲ. ಸಾಮಾಜಿಕ ಅಂತರ ಕಾದುಕೊಳ್ಳುವ ಜೊತೆಗೆ, ಮಾಸ್ಕ ಕಡ್ಡಾಯ ಧರಿಸಬೇಕು. ಕೊರೊನಾ ಸೋಂಕು ನಿಯಂತ್ರಣಕ್ಕೆ ಸಹಕರಿಸಬೇಕು ಎಂದು ತಹಶೀಲ್ದಾರ ಶೈಲೇಶ ಪರಮಾನಂದ ಮನವಿ ಮಾಡಿದ್ದಾರೆ.