ದಾಂಡೇಲಿಯಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇರುವ ಕೊರೊನಾ ಗುರುವಾರ ಮತ್ತೆ 20 ಜನರನ್ನು ಆಕ್ರಮಿಸಿದೆ. ಹಳಿಯಾಳ ರಸ್ತೆ ಅಲೈಡ್ ಏರಿಯಾದಲ್ಲಿ ಮೃತ ಪಟ್ಟ ಓರ್ವ ವ್ಯಕ್ತಿಯ ಗಂಟಲು ದ್ರವದ ಪರೀಕ್ಷಾ ವರದಿಯೂ ಪಾಸಿಟಿವ್ ಬಂದಿದೆ ಎಂಬ ಮಾಹಿತಿ ಲಭ್ಯವಾಗಿದೆ. !
ನಗರದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಗುರುವಾರ 20 ಜನರಲ್ಲಿ ಪಾಸಿಟಿವ್ ಸೇರಿ ಇಲ್ಲಿಯವರೆಗೆ 321 ಜನರಲ್ಲಿ ಪಾಸಿಟಿವ್ ಬಂದಿದ್ದು 181 ಕ್ಕೂ ಹೆಚ್ಚು ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಗುರುವಾರದ ವರದಿಯಲಿ ಹಳಿಯಾಳ ರಸ್ತೆಯ ಅಲೈಡ್ ಏರಿಯಾದಲ್ಲಿ ಓರ್ವ ವ್ಯಕ್ತಿ ಅನಾರೋಗ್ಯದಿಂದ ಮೃತ ಪಟ್ಟಿದ್ದು, ಆತನ ಗಂಟಲು ದ್ರವದ ಪರೀಕ್ಷೆ ನಡೆಸದಾಗ ಅದು ಪಾಸಿಟಿವ್ ಎಂದು ಬಂದಿದೆ. ಇದೇ ಸಂದರ್ದಭಲ್ಲಿ ಅವರ ಕುಟುಂಭ ಸದಸ್ಯರ ಗಂಟಲು ದ್ರವದ ಪರೀಕ್ಷೆ ನಡೆಸಿದಾಗಲೂ ಕೆಲವರ ವರದಿ ಪಾಸಿಟಿವ್ ಬಂದಿರುವ ಮಾಹಿತಿಯಿದೆ.
ಇದರಂತೆ ಗುರುವಾರ ನಗರದ ವಿವಿದೆಡೆ ಜನರಲ್ಲಿ ಸೋಂಕು ಹರಡಿದೆ. ಇತ್ತೀಚಿನ ದಿನಗಳಲ್ಲಿ ನಗರದಲ್ಲಿ ಕೊರೊನಾ ಸೋಕು ಎಲ್ಲೆಂದರಲ್ಲೆ, ಯಾರೆಂದರಲ್ಲಿ ಹರಡುತ್ತಿದ್ದು, ಸೋಂಕಿತರ ಟ್ರಾವೆಲ್ ಹಿಸ್ಟರಿ ಹಾಗೂ ಸಂಪರ್ಕಗಳೇ ಗೊತ್ತಾಗದಂತಾಗಿದೆ. ಕಾರಣ ಸಾರ್ವಜನಿಕರು ಆದಷ್ಟು ಮುಂಜಾಗೃತೆ ವಹಿಸಲೇಬೇಕಾದ ಜರೂರತ್ತಿದೆ ಎನ್ನುತ್ತಾರೆ ನಗರದ ಪ್ರಾಜ್ಞರು. ಇದು ಅಧಿಕಾರಿಗಳ ಮನವಿ ಕೂಡಾ.