ದಾಂಡೇಲಿಯಲ್ಲಿ ಕೆಲದಿನಗಳಿಂದ ಎರಡಂಕಿಯಲ್ಲಿ ಏರಿಕೆಯಾಗುತ್ತಿದ್ದ ಕೊರೊನಾ ಸೋಂಕು ಮಂಗಳವಾರ ತುಸು ನೆಮ್ಮದಿ ಎಂಬಂತೆ ಒಂದಕಿಗೆ ಇಳಿದಿದೆ.
ಮಂಗಳವಾರ ಮುಂಜಾನೆ ದೊರೆತ ಮಾಹಿತಿಯಂತೆ ದಾಂಡೇಲಿಯಲ್ಲಿ 6 ಜನರು ಸೋಂಕಿಗೊಳಗಾಗಿದ್ದಾರೆ. ಈವರನ್ನು ಕೋವಿಡ ಕೇರ್ ಸೆಂಟರ್ ನಲ್ಲಿ ಚಿಕಿತ್ಸೆಗೊಳಪಡಿಸಲಾಗಿದೆ.
ಇಲ್ಲಿಯವರೆಗೆ ದಾಂಡೇಲಿಯಲ್ಲಿ 289 ಜನರು ಸೋಂಕಿಗೊಳಗಾದಂತಾಗಿದ್ದು ಇವರಲ್ಲಿ 113 ಜನರು ಗುಣಮುಖರಾಗಿ ಮನೆ ಸೇರಿದ್ದಾರೆ. 173 ಜನರು ಕೋವಿಡ ಕೇರ್ ಸೆಂಟರ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ.