ದಾಂಡೇಲಿಯಲ್ಲಿ ಶುಕ್ರವಾರ 15 ಜನರಲ್ಲಿ ಕೊರೊನಾ ಸೋಂಕು ದೃಢವಾಗಿದ್ದು, ಇದರಿಂದಾಗಿ ಇಲ್ಲಿಯವರೆಗೆ ದಾಂಡೇಲಿಯಲ್ಲಿ ಸೋಂಕಿತರ ಸಂಖ್ಯೆ 200 ರ ಗಡಿ ದಾಟಿದಂತಾಗಿದೆ.
ಶುಕ್ರವಾರದ ವರದಿಯಲ್ಲಿ ಗಾಂಧಿನಗರ, ಕಾಗದ ಕಂಪನಿ ಕ್ವಾಟ್ರಸ್, ಬೈಲಪಾರ, ಅಜಾದ ನಗರ, ಸುಭಾಶ ನಗರ, ಲಿಂಕರೋಡ್ ಸೇರಿದಂತೆ ವಿವಿದ ಪ್ರದೇಶಗಳ ಜನರಲ್ಲಿ ಪಾಸಿಟಿವ್ ಬಂದಿದೆ.
ನಗರದಲ್ಲಿ ಕೊರೊನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇದು ಆತಂಕಕಾರಿ ಬೆಳವಣಿಗೆಯಾಗಿದೆ. ಇಲ್ಲಿಯವರೆಗೆ 204 ಪ್ರಕರಣಗಳು ದಾಖಲಾದಂತಾಗಿದ್ದು 25 ಜನರು ಗುಣಮುಖರಾಗಿದ್ದಾರೆ.