ದಾಂಡೇಲಿಯಲ್ಲಿ ಸೋಮವಾರ ಮಹಾಮಾರಿ ಕೊರೊನಾ ರಣಕೇಕೆ ಹಾಕಿದ್ದು, ಒಟ್ಟೂ 47 ಜನರಲ್ಲಿ ಸೋಂಕು ದೃಢವಾಗಿದೆ. ಇದರಿಂದ ಒಟ್ಟೂ ಸೋಂಕಿತರ ಸಂಖ್ಯೆ 154 ರ ಗಡಿದಾಟಿದಂತಾಗಿದೆ.
ಸೋಮವಾರದ ಮುಂಜಾನೆ ಹೆಲ್ತ ಬುಲೆಟಿನ್ ನಲ್ಲಿ ದಾಂಡೇಲಿಯಲ್ಲಿ 28 ಪಾಸಿಟಿವ್ ಪ್ರಕರಣಗಳಾಗುರುವ ವರದಿಯಾಗಿತ್ತು. ಇದು ರವಿವಾರ ರಾತ್ರಿ ಬಂದ ಪರೀಕ್ಷಾ ವರದಿ ಎನ್ನಲಾಗಿದೆ. ಸೋಮವಾರ ಮದ್ಯಾಹ್ನದ ಹೊತ್ತಿಗೆ ಮತ್ತೆ 19 ಪಾಸಿಟಿವ್ ಪ್ರಕರಣಗಳು ಬಂದಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಇದರಿಂದ ಸೋಮವಾರ ದಾಂಡೇಲಿಯ ಒಟ್ಟೂ 47 ಜನರಲ್ಲಿ ಕೊರೊನಾ ಸೋಂಕು ದೃಢವಾದಂತಾಗಿದೆ.
ಸೋಮವಾರದ ಈ ಸಂಖ್ಯೆ ದಾಂಡೇಲಿಗರನ್ನು ಬೆಚ್ಚಿ ಬೀಳಿಸಿದೆ. ಇಂದಿನ ವರದಿಯಲ್ಲು ಈ ಸೋಂಕು ಭಾಗಶಹ ನಗರದ ಎಲ್ಲ ಪ್ರದೇಶವನ್ನಾಚರಿಸಿದೆ. ಉದ್ಯಮ ನಗರದಲ್ಲಿ ಕೊರೊನಾ ರಣಕೇಕೆಯ ಬಗ್ಗೆ ಜನರು ಭಯಬೀತಗೊಳ್ಳುತ್ತಿದ್ದಾರೆ. ಆಡಳಿತ ವ್ಯವಸ್ಥೆ ಈ ಸೋಂಕನ್ನು ನಿಯಂತ್ರಿಸುವಲ್ಲಿ ಪ್ರಾಮಾಣಿಕವಾಗಿ ಅವರ ಶಕ್ತಿ ಮೀರಿ ಪ್ರಯತ್ನಿಸುತ್ತಿದ್ದರೂ, ಅದನ್ನೂ ಮೀರಿ ಸೋಂಕಿನ ಸಂಖ್ಯೆ ವೇಗವಾಗಿ ಹೆಚ್ಚುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ.