ಉದ್ಯಮ ನಗರ, ಪ್ರವಾಸೋದ್ಯಮ ನಗರ ಖ್ಯಾತಿಯ ದಾಂಡೇಲಿಯಲ್ಲಿ ಕೊರೊನಾ ಸೋಮಖಿತರ ಸಂಖ್ಯೆ ನೂರರ ಗಡಿ ದಾಟಿದೆ. ಶನಿವಾರದವರೆಗೂ ಇಲ್ಲಿ 107 ಜನರಲ್ಲಿ ಕೊರೊನಾ ಸೋಂಕು ದೃಢವಾಗಿದೆ.
ಎಷ್ಟು ಪಾಸಿಟಿವ್- ನೆಗೆಟಿವ್?
ದಾಂಡೇಲಿಯಲ್ಲಿ ಕೊರೊನಾ ಆರಂಭವಾದಾಗಿನಿಂದ ಇಲ್ಲಿಯವರೆಗೆ 1956 ಜನರ ಗಂಟಲುದ್ರವ ಪರೀಕ್ಷೆ ಮಾಡಲಾಗಿದೆ. ಅವರಲ್ಲಿ1665 ಜನರ ವರದಿ ಬಂದಿದೆ. ಇವರಲ್ಲಿ 1579 ಜನರ ಪರೀಕ್ಷಾ ವರದಿ ನೆಗೆಟಿವ್ ಬಂದಿದ್ದು, 107 ಜನರ ವರದಿ ಪಾಸಿಟಿವ್ ಬಂದಿರುತ್ತದೆ. ಇವರಲ್ಲಿ 15 ಜನರು ಗುಣಮುಖರಾಗಿ ಮನೆ ಸೇರಿದ್ದಾರೆ.
ಗ್ರಾಮೀಣ ಭಾಗಕ್ಕೂ ಎಂಟ್ರಿ
ಇಲ್ಲಿವರೆಗೂ ದಾಂಡೇಲಿ ನಗರವನ್ನೇ ಸುತ್ತಿವರೆದಿದ್ದ ಕೊರೊನಾ ಶನಿವಾರ ನಗರಕ್ಕೆ ಸಮೀಪದ ಆಲೂರು ಗ್ರಾಮಕ್ಕೂ ಎಂಟ್ರಿ ಕೊಟ್ಟಿದೆ. ಆಲೂರಿನ 26 ವಷದ ಕಾಗದ ಕಂಪನಿಯ ಕಾರ್ಮಿಕನಲ್ಲಿ ಸೋಂಕು ದೃಢವಾಗಿದ್ದು, ಗ್ರಾಮೀಣ ಜನರು ಜಾಗೃತೆ ವಹಿಸಿದ್ದಾರೆ.
ಕಾಗದ ಕಂಪನಿಯೊಳಗೂ ಪ್ರವೇಶ
ನಗರದ ವೆಸ್ಟ್‌ಕೋಸ್ಟ್ ಪೇಪರ್ ಮಿಲ್‌ನ ಕಾರ್ಮಿಕರಲ್ಲಿ ಸೋಂಕು ಖಚಿತವಾಗಿದೆ. ಹಿಂದೆ ಹೊರ ಭಾಗದಿಂದ ಬಂದಿದ್ದು ಇಬ್ಬರಲ್ಲಿ ಸೋಂಕು ದೃಢವಾಗಿತ್ತು. ಇದೀಗ ಹಳಿಯಾಳದ ತೇರಗಾಂವನಿಂದ ಆಗಮಿಸಿದ್ದ ಪಾಸಿಟಿವ್ ಇದ್ದ ಕಾಮಿಕನಿಂದ ಕಂಪನಿಯ ಗೋಡಾನ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಐವರು ಕಾರ್ಕಮಿರಲ್ಲಿ ಸೋಂಕು ದೃಢವಾಗಿದೆ. ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ತಹಶೀಲ್ದಾರರು ಕಂಪನಿಯೊಳಗೆ ಅಧಿಕಾರಿಗಳ ಜೊತೆ ಸಭೆ ನಡೆಸಿ ಅಗತ್ಯ ಮುಜಾಗೃತೆ ವಹಿಸಲು ಸೂಚಿಸಿದ್ದಾರೆ.
ಸರಕಾರಿ ಆಸ್ಪತ್ರೆಯೊಳಗೂ ಕೊರೊನಾ
ನಗರದ ಸರಕಾರಿ ಆಸ್ಪತ್ರೆಯ ಓರ್ವ ವೈದ್ಯರು ಹಾಗೂ ಮೂವರು ಸಿಬ್ಬಂದಿಗಳು ಸೇರಿ ನಾಲ್ವರಲ್ಲಿ ಕೊರೊನಾ ಪಾಸಿಟಿವ್ ವರದಿ ಶನಿವಾರ ಬಂದಿದೆ. ಇದುವರೆಗೂ ಜನರಿಗೆ ಉತ್ತಮ ಸೇವೆ ನೀಡುತ್ತಿದ್ದ ಸರಕಾರಿ ಆಸ್ಪತ್ರೆಯಲ್ಲಿ ಈಗ ಆತಂಕ ಎದುರಾಗಿದೆ. ಅನಗತ್ಯ ಜನರು ಆಸ್ಪತ್ರೆಗೆ ಬಾರದಂತೆ ನಿರ್ಬಂದ ವಿಧಿಸಲಾಗಿದೆ.