ಕೆಲ ದಿನಗಳಿಂದ ದಿನದಿಂದ ದಿನಕ್ಕೆ ಹೆಚ್ಚುತ್ತ, ನೂರ (107) ಗಡಿ ದಾಟದ್ದ ಕೊರೊನಾ ದಾಂಡೇಲಿಯಲ್ಲಿ ರವಿವಾರ ರಜಾ ಪಡೆದುಕೊಂಡಂತಿದೆ.
ಶನಿವಾರದ ದಾಂಡೇಲಿಯಲ್ಲಿ 22 ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದವು. ಸಂಜೆಯ ಹೊತ್ತಿಗೆ ಮತ್ತೊಂದು (ಸದ್ಯ ಧಾರವಾಡದಲ್ಲಿರುವ ದಾಂಡೇಲಿಯ ಟೌನ್‌ಶಿಪ್‌ನ 74 ವರ್ಷದ ಪುರುಷ) ಪ್ರಕರಣ ಸೇರ್ಪಡೆಯಾಗಿ 23 ಆಗಿತ್ತು. ಆದರೆ ರವಿವಾರ ಮದ್ಯಾಹ್ನದವರೆಗೂ ದಾಂಡೇಲಿಯಲ್ಲಿ ಯಾವ ಕೊರೊನಾ ಸೋಂಕಿತರ ಪ್ರಕರಣವೂ ದಾಖಲಾಗಿರುವ ಬಗ್ಗೆ ಮಾಹಿತಿಯಿಲ್ಲ. ಹಾಗಾಗಿ ದಾಂಡೇಲಿಯ ಮಟ್ಟಿಗೆ ಕೊರೊನಾಕ್ಕೆ ಬಾನುವಾರದ ರಜೆ ಎನ್ನಬಹುದು. ಸಂಜೆ ಮತ್ತೆ ಬರುವ ವರದಿಯೇನಾಗಲಿದೆಯೋ ಕಾದು ನೋಡಬೇಕು.