Site icon ಒಡನಾಡಿ

ಬೆಂಗಳೂರು ಕಾಲೇಜಿಗೆ ದಾಂಡೇಲಿಯ ದಿಗ್ವಿಜಯ ಪ್ರಥಮ

ಧಿಗ್ವಿಜಯಸಿಂಹ ಘೋರ್ಪಡೆ

ಬೆಂಗಳೂರಿನ ಶ್ರೀ ಚೈತನ್ಯ ನೀಟ್ ಕ್ಯಾಪಸ್ ಪದವಿ ಪೂರ್ವ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ದಾಂಡೇಲಿಯ ದಿಗ್ವಿಜಯಸಿಂಹ ಘೋರ್ಪಡೆ ಪಿ.ಯು.ಸಿ. ದ್ವಿತೀಯ ವರ್ಷದ ವಿಜ್ಞಾನ ವಿಭಾಗದ ಪರೀಕ್ಷೆಯಲ್ಲಿ 579 ಅಂಕಗಳೊಂದಿಗೆ ಶೇ. 96.5ರಷ್ಟು ಸಾಧನೆ ಮಾಡಿ ಕಾಲೇಜಿಗೆ ಪ್ರಥಮ ಸ್ಥಾನ ಬಂದಿರುತ್ತಾನೆ.


ಈತ ಈ ಶಾಲೆಯಲ್ಲಿ ಆರನೇ ತರಗತಿಯಿಂದಲೇ ಪ್ರಥಮ ಸ್ಥಾನ ಪಡೆಯುತ್ತಿದ್ದ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದು, ಈ ವಿದ್ಯಾರ್ಥಿ ದಾಂಡೇಲಿಯ ಉಪನ್ಯಾಸಕ ಉಪೇಂದ್ರ ಘೋರ್ಪಡೆ ಹಾಗೂ ಶಿಕ್ಷಕಿ ಸುಧಾ ಸಾಳುಂಕೆಯವರ ಮಗನಾಗಿದ್ದಾನೆ. ಈತನ ಸಾಧನೆಗೆ ಕಾಲೇಜಿನ ಪ್ರಾಚಾರ್ಯರು, ಸಿಬ್ಬಂದಿಗಳು ಅಭಿನಂದಿಸಿದ್ದಾರೆ.

Exit mobile version