Site icon ಒಡನಾಡಿ

ದಾಂಡೇಲಿಯಲ್ಲಿ 10 ದಿನ ಲಾಕ್‍ಡೌನ್ ಮಾಡಿ: ಭಾ.ಜ.ಪ ಮನವಿ

ದಾಂಡೇಲಿ: ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ದಾಂಡೇಲಿ ನಗರವನ್ನು ಕನಿಷ್ಠ 10 ದಿನವಾದರೂ ಲಾಕ್‍ಡೌನ್ ಮಾಡುವ ಮೂಲಕ ಹೆಚ್ಚುತ್ತಿರುವ ಸೋಂಕನ್ನು ತಡೆಯಲು ಕ್ರಮಕೈಗೊಳ್ಳಬೇಕು ಎಂದು ದಾಂಡೇಲಿಯ ಭಾರತೀಯ ಜನತಾ ಪಕ್ಷ ಒತ್ತಾಯಿಸಿದೆ.
ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರಿಗೆ, ಜಿಲ್ಲಾಧಿಕಾರಿಗಳಿಗೆ ಬರೆದ ಮನವಿಯನ್ನು ತಹಶೀಲ್ದಾರ ಶೈಲೇಶ ಪರಮಾನಂದ ಅವರ ಮೂಲಕ ನೀಡಿದ್ದಾರೆ.
ದಾಂಡೇಲಿ ನಗರದಲ್ಲಿ ದಿನದಿಂದ ದಿನಕ್ಕೆ ಕೊರೋನಾ ಮಹಾಮಾರಿ ಪ್ರಕರಣದ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದ್ದು, ನಗರದಲ್ಲಿ ಆತಂಕ ಮನೆ ಮಾಡಿದೆ. ಇದೇ ರೀತಿ ಮುಂದುವರೆದಲ್ಲಿ ಸೋಂಕು ತೀವ್ರ ಸ್ವರೂಪವನ್ನು ಪಡೆಯಲಿದೆ. ಅಲ್ಲದೇ ನಗರದಲ್ಲಿ ಬಹುತೇಕ ಜನರಲ್ಲಿ ರಕ್ತದೊತ್ತಡ, ಶುಗರ್, ಹಳದಿ ಕಾಮಾಲೆ, ಅಸ್ತಮಾ ಮೊದಲಾದ ಕಾಯಿಲೆಗಳು ಕಾಡುತ್ತಿದ್ದು, ಈ ಸಂದರ್ಭದಲ್ಲಿ ಮಹಾಮಾರಿ ಕೊರೊನಾ ಸೋಂಕು ಹೆಚ್ಚುತ್ತ ಹೋದಲ್ಲಿ ಜನರ ಬದುಕಿನ ಮೇಲೆ ಗಾಢವಾದ ಪರಿಣಾಮ ಬೀಳಲಿದೆ. ಕೊರೋನಾ ಸೋಂಕು ನಿಯಂತ್ರಿಸುವದಕ್ಕಾಗಿ ಲಾಕ್‍ಡೌನ್ ಅನಿವಾರ್ಯವಾಗಿದ್ದು, ಈ ನಿಟ್ಟಿನಲ್ಲಿ ಆದಷ್ಟು ಬೇಗನೆ ಮುಂದಿನ ಕನಿಷ್ಟ 10 ದಿನಗಳವರೆಗೆ ದಾಂಡೇಲಿ ನಗರದಲ್ಲಿ ಕಠಿಣ ಲಾಕ್‍ಡೌನ್ ಘೋಷಿಸಬೇಕು ನಗರದ ಜನರ ಆರೋಗ್ಯವನ್ನು ಕಾಪಾಡಬೇಕು ಮನವಿಯಲ್ಲಿ ವಿನಂತಿಸಿದ್ದಾರೆ.
ಈ ಸಂದರ್ಭದಲ್ಲಿ ಭಾಜಪ ದಾಂಡೇಲಿ ಘಟಕದ ಅಧ್ಯಕ್ಷ ಚಂದ್ರಕಾಂತ ಕ್ಷೀರಸಾಗರ, ಜಿಲ್ಲಾ ಯುವಮೋರ್ಚಾ ಉಪಾಧ್ಯಕ್ಷ ಸುಧೀರ ಶೆಟ್ಟಿ, ಪಕ್ಷದ ನಗರ ಸಭಾ ಸದಸ್ಯರುಗಳಾದ ರೋಷನಜೀತ, ನರೇಂದ್ರ ಚವ್ಹಾಣ, ದಶರಥ ಬಂಡಿವಡ್ಡರ, ಬುದ್ದಿವಂತಗೌಡಾ ಪಾಟೀಲ, ವಿಷ್ಣು ವಾಜ್ವೆ, ಪದ್ಮಜಾ ಜನ್ನು, ರಮಾದೇವಿ ರವೀಂದ್ರ, ಮಹಾದೇವಿ ಭದ್ರಶೆಟ್ಟಿ ಪಕ್ಷದ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.

Exit mobile version