ದಾಂಡೇಲಿಯಲ್ಲಿ ಮಂಗಳವಾರ ಕೊರೊನಾ ತನ್ನ ರೌದ್ರಾವತಾರ ತೋರಿಸಿದ್ದು… ಲಭ್ಯವಾಗಿರುವ ಮಾಹಿತಿಯ ಪ್ರಕಾರ ಮಂಗಳವಾರ ಒಂದೇ ದಿನ 22 ಜನರಲ್ಲಿ ಸೋಂಕು ದೃಢ ಪಟ್ಟಿದೆ ಎನ್ನಲಾಗಿದೆ.
ಇವರಲ್ಲಿ ಟೌನ್ ಶಿಪ್ ಸ್ವೀಪರ್ ಕ್ವಾಟ್ರಸ್ ನ ಒಂದೇ ಪ್ರದೇಶದ 12 ಜನರಲ್ಲಿ ಸೋಂಕು ದೃಢವಾಗಿದ್ದು, ಈ ಪ್ರದೇಶವನ್ನು ಸೀಲ್ ಡೌನ್ ಮಾಡಲಾಗಿದೆ. ಉಳಿದವರ ಮಾಹಿತಿ ಬರಬೇಕಿದೆ. ಸೋಂಕಿತರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಸೋಮವಾರ ರಾತ್ರಿ ಮಾರುತಿ ನಗರದ ವೃದ್ದೆಯೋರ್ವಳು ಮೃತಪಟ್ಟಿದ್ದು, ಈಕೆಯಲ್ಲಿಯೂ ಕೊರೊನಾ ಪಾಸಿಟಿವ್ ವರದಿ ಬಂದಿದೆ. ಅನಾರೋಗ್ಯ ಪೀಡಿತಳಾಗಿದ್ದ ಈಕೆ ಇ.ಎಸ್.ಐ. ಆಸ್ಪತ್ರೆಯಲ್ಲಿ ದಾಖಲಾಗಿದ್ದಳು. ಕೊರೊನಾ ಸೋಂಕಿನ ಕಾರಣಕ್ಕೆ ಈ ಅಸ್ಪತ್ರೆ ಸೀಲ್ ಡೌನ ಆದ ಹಿನ್ನೆಲೆಯಲ್ಲಿ ಈಕೆಯನ್ನು ಮನೆಗೆ ಕಳುಹಿಸಿ ಕ್ವಾರೆಂಟೈನ್ ನಲ್ಲಿ ಇಡಲಾಗಿತ್ತು. ರೋಗ ಬಿಗಡಾಯಿಸಿದ ಈಕೆ ಸೋಮವಾರ ರಾತ್ರಿ ಮೃತಪಟ್ಟಿದ್ದಳು. ಮಂಗಳವಾರ ಬಂದ ಹೆಲ್ತ ಬುಲೆಟಿನ್ ನಲ್ಲಿ ಈಕೆಯದ್ದು ಪಾಸಿಟಿವ್ ಬಂದಿರುತ್ತದೆ.
ಈ ಸಾವನ್ನು ಕೊರೊನಾ ಸಾವೆಂದೇ ಪರಿಗಣಿಸಿದರೆ ದಾಂಡೇಲಿಯಲ್ಲಿ ಕೊರೊನಾಕ್ಕೆ ಮೊದಲ ಬಲಿಯಾದಂತಾಗಿದೆ. ಹೆಚ್ಚುತ್ತಿರುವ ಕೊರೊನಾ ಸೋಂಕಿನಿಂದಾಗಿ ಜನರಲ್ಲಿ ಆತಂಕ ಹೆಚ್ಚುತ್ತಿದೆ.