ದಾಂಡೇಲಿಯಲ್ಲಿ ಸೋಮವಾರ ಮತ್ತೆ ಐದು ಜನರಲ್ಲಿ ಕೊರೊನಾ ಪಾಸಿಟಿವ್ ವರದಿ ಬಂದಿರುವ ಮಾಹಿತಿಯಿದೆ. ಇದರಿಂದಾಗಿ ದಾಂಡೇಲಿಯಲ್ಲಿ ಒಟ್ಟೂ ಸೋಂಕಿತರ ಸಂಖ್ಯೆ 37 ಕ್ಕೆ ಏರಿಕೆಯಾದಂತಾಗಿದೆ.
ಸೋಮವಾರ ಬಂದಿರುವ ಮಾಹಿತಿಯಂತೆ ನಗರದ ಹಳಿಯಾಳ ರಸ್ತೆಯ ಅಲೈಡ್ ಏರಿಯಾದ ನಾಲ್ವರು ಹಾಗೂ ಮಾರುತಿ ನಗರದ ಓರ್ವರಲ್ಲಿ ಕೊರೊನಾ ಸೋಂಕು ದೃಢವಾಗಿದೆ. ಇವರಲ್ಲಿ ಮೂವರು ಪುರುಷರು ಇಬ್ಬರು ಮಹಿಳೆಯರು ಎನ್ನಲಾಗಿದೆ.
ಇನ್ನೂ 200 ಕ್ಕೂ ಹೆಚ್ಚು ಜನರ ಗಂಟಲು ದ್ರವದ ವರದಿ ಬರಬೇಕಾಗಿದ್ದು, ಮಂಗಳವಾರ ಹಾಗೂ ಬುಧವಾರದ ವರದಿಯ ಮೇಲೆ ಜನರ ಕುತುಹಲ ಹೆಚ್ಚಿದೆ