ಕಳೆದೆರಡು ದಿನಗಳಿಂದ ದಾಂಡೇಲಿಗರನ್ನು ಭಯ ಬೀಳಿಸುತ್ತಿದ್ದ ದಾಂಡೇಲಿಯಲ್ಲಿ ರವಿವಾರ ಒಂದಿಷ್ಟು ಸಮಾಧಾನದ ಸುದ್ದಿ ಬಂದಿದೆ.
ರವಿವಾರ ನಗರದ ಓರ್ವರಲ್ಲಿ ಮಾತ್ರ ಕೊರೊನಾ ಸೋಂಕು ದೃಢವಾಗಿದೆ. ನಗರದ 79 ವರ್ಷದ ಹಿರಿಯ ವೈದ್ಯರಲ್ಲಿ ಪಾಸಿಟಿವ್ ವರದಿ ಬಂದಿದ್ದು ಇವರು ಸೊಂಕಿಗೊಳಗಾಗಿರುವ ನ್ಯಾಯವಾದಿ ಜ್ವರ ೈಂದು ಆಸ್ಪತ್ರೆಗೆ ಬಂದಿದ್ದ ಸಂದರ್ಭದಲ್ಲಿ ತಪಾಸಣೆ ಮಾಡಿದ್ದರು ಎನ್ನಲಾಗಿದೆ. ಆಸ್ಪತ್ರೆ ಸಿಬ್ಬಂದಿಗಳ ಗಂಟಲು ದ್ರವದ ಪರೀಕ್ಷೆಗೆ ಕಳುಹಿಸಲಾಗಿದೆ. ಆರಂಭದಲ್ಲಿ ನ್ಯಾಯವಾದಿಗೆ ಔಷಧೋಪಚಾರ ನೀಡಿದ್ದ ಇನ್ನೊಬ್ಬ ಖಾಸಗಿ ವೈದ್ಯರ ಗಂಟಲು ದ್ರವದ ವರದಿ ನೆಗೆಟಿವ್ ಬಂದಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಇನ್ನೂ ಹಲವರ ಪರೀಕ್ಷಾ ವರದಿ ಬರಬೇಕಿದೆ.