ದಾಂಡೇಲಿ: ಬಂಗಾರುಪೇಟೆ ತಾಲೂಕಿನ ತಹಶೀಲ್ದಾರ ಬಿ.ಕೆ. ಚಂದ್ರಮೌಳೇಶ್ವರವರ ಹತ್ಯೆ ಖಂಡಿಸಿ, ಸರಕಾರಿ ಅಧಿಕಾರಿಗಳು ಹಾಗೂ ನೌಕರರಿಗೆ ಅಗತ್ಯ ರಕ್ಷಣೆ ನೀಡುವಂತೆ ಒತ್ತಾಯಿಸಿ ಕರ್ನಾಟಕ ಸರಕಾರಿ ನೌಕರರ ಸಂಘಟನೆಯ ದಾಂಡೇಲಿ ಘಟಕದವರು ತಹಶೀಲ್ದಾರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ನೀಡಿ ಒತ್ತಾಯಿಸಿದ್ದಾರೆ.
ಕೋಲಾರದ ಬಂಗಾರ ಪೇಟೆಯ ತಹಶಿಲ್ದಾರರು ಜಮೀನು ವ್ಯಾಜ್ಯಕ್ಕೆ ಸಂಬಂದಿಸಿ ಪೋಲಿಸ್ ರಕ್ಷಣೆಯಲ್ಲಿಯೇ ಸರ್ವೆ ನಡೆಸುತ್ತಿರುವ ಸಂದರ್ಭದಲ್ಲಿ ದುಷ್ಕರ್ಮಿಗಳು ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾರೆ. ಇದನ್ನು ಖಂಡಿಸುತ್ತೇವೆ. ರಾಜ್ಯದೆಲ್ಲಡೆ ಹಲವು ಸಂದರ್ಭದಲ್ಲಿ ಸರಕಾರಿ ನೌಕಕರರು ಕರ್ತವ್ಯ ನಿರ್ವಹಿಸುವಾಗ ಇಂತಹ ಘಟನೆಗಳು ನಡೆಯುತ್ತಿದ್ದು, ಇದನ್ನು ತಡೆಯಬೇಕು. ತಹಶೀಲ್ದಾರನ್ನು ಹತ್ಯೆ ನಡೆಸಿದರಿಗೆ ಕಠಿಣ ಶಿಕ್ಷೆ ವಿಧಿಸಬೇಕು. ಸರಕಾರಿ ಅಧಿಕಾರಿಗಳು, ನೌಕರರಿಗೆ ಅಗತ್ಯ ರಕ್ಷಣಾ ಕ್ರಮ ಕೈಗೊಳ್ಳಬೇಕು. ಮೃತರ ಕುಟುಂಭಕ್ಕೆ ಗರಿಷ್ಠ ಪ್ರಮಾಣದ ಪರಿಹಾರ ಹಾಗೂ ಕುಟುಂಭದ ಓರ್ವ ಸದಸ್ಯರಿಗೆ ಅನುಕಂಪದ ಆಧಾರದಲ್ಲಿ ಉದ್ಯೋಗ ಒದಗಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಸರಕಶರಿ ನೌಕರರ ಸಂಘಟನೆ ದಾಂಡೇಲಿ ಘಟಕದ ಅಧ್ಯಕ್ಷ ಸುರೇಶ ನಾಯಕ, ಕಾರ್ಯದರ್ಶಿ ಪಿ.ಆರ್. ಯೋಗೇಂದ್ರ, ರಾಜ್ಯ ಪರಿಷತ್ ಸದಸ್ಯ ಪಿ.ಆರ್. ರಾಣೆ, ಪದಾಧಿಕಾರಿಗಳಾದ ಬಸವರಾಜ ಅಲಗೇರಿ, ಗೌಡೆಪ್ಪ ಬನಕದಿನ್ನಿ, ಸೋಮನಗೌಡ, ಕೆ.ಎಲ್. ರಾಠೋಡ್, ಮುಂತಾದವರಿದ್ದರು. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸದಸ್ಯ ಪ್ರವೀಣ ನಾಯ್ಕ ಮನವಿ ವಾಚಿಸಿದರು. ಸರಕಾರಿ ನೌಕಕರು ಭಾಗವಹಿದ್ದರು.