ದಾಂಡೇಲಿ ಸಿಂಹಕೂಟ (ಲಾಯನ್ಸ್ ಕ್ಲಬ್) ಕ್ಕೆ ಪ್ರಸಕ್ತ ಸಾಲಿನಲ್ಲಿ ಮಹಿಳಾ ಮಣಿಗಳೇ ಸಾರಥ್ಯ ವಹಿಸಿದ್ದು, ಇದು ದಾಂಡೇಲಿ ಲಾಯನ್ಸ್ ಕ್ಲಬ್‍ನ ಇತಿಹಾಸದಲ್ಲಿಯೇ ಮೊದಲ ಬಾರಿಯಾಗಿದೆ.
ಲಯನ್ಸ್ ಕ್ಲಬ್‍ನ ನೂತನ ಅಧ್ಯಕ್ಷರಾಗಿ ಅನ್ನಪೂರ್ಣ ಬ್ಯಾಕೋಡ, ಕಾರ್ಯದರ್ಶಿಯಾಗಿ ನಾಗರತ್ನಾ ಹೆಗಡೆ, ಖಜಾಂಚಿಯಾಗಿ ಲತಾ ಯು. ಶೆಟ್ಟಿ ಆಯ್ಕೆಯಾಗಿದ್ದಾರೆ. ಉಳಿದಂತೆ ಲಯನ್ಸ್ ಕ್ಲಬ್ ಪುರುಷ ಹಾಗೂ ಮಹಿಳಾ ಪದಾಧಿಕಾರಿಗಳು ವಿವಿಧ ಹುದ್ದೆಗಳನ್ನಲಂಕರಿಸಿದ್ದಾರೆ.