ದಾಂಡೇಲಿಯಲ್ಲಿ ಬುಧವಾರ ಮತ್ತೆರಡು ಕೊರೊನೊ ಪಾಸಿಟಿವ್ ಪ್ರಕರಣ ದೃಢವಾಗಿದ್ದು, ಇದರಿಂದಾಗಿ ದಾಂಡೇಲಿಯ ಒಟ್ಟೂ ಸೋಂಕಿತರ ಸಂಖ್ಯೆ 17ಕ್ಕೆ ಏರಿದಂತಾಗಿದೆ.
ಬುಧವಾರ ಸೋಂಕು ದೃಡವಾದವರು ಇಬ್ಬರೂ ಪಟೇಲ ನಗರದವರಾಗಿದ್ದಾರೆ. ಅಲ್ಲಿಯ 25 ವರ್ಷದ ಮಹಿಳೆ ಹಾಗೂ 35 ವರ್ಷದ ಪುರುಷನಲ್ಲಿ ಸೋಂಕು ದ್ರಢವಾಗಿದೆ.
ಇನ್ನು ಬುಧವಾರ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ 13, ಯಲ್ಲಾಪುರದಲ್ಲಿ 4 ಸೇರಿದಂತೆ ಜಿಲ್ಲೆಯಲ್ಲಿ ಒಟ್ಟೂ 20 ಕೊರೊನಾ ಪಾಸಿಟಿವ್ ಪ್ರಕರಣ ದಾಖಲಾಗಿದ್ದು, ಜಿಲ್ಲೆಯಲ್ಲಿ ಇದುವರೆಗೂ 491 ಪ್ರಕರಣಗಳು ದಾಖಲಾದಂತಾಗಿದೆ.