Site icon ಒಡನಾಡಿ

ಬ್ಯಾಂಕ್, ಸಹಕಾರಿ ಸಂಘಗಳಿಂದ ಪಡೆದ ಸಾಲವನ್ನು ಬಡ್ಡಿ ಸಹಿತ ಮನ್ನಾ ಮಾಡಿ

ದಾಂಡೇಲಿ: ಕೊರೊನಾ ಸಂಕಷ್ಠ ಕಾಲ ಇರುವುದಿಂದ ಸ್ತ್ರೀ ಶಕ್ತಿ, ಸ್ವ-ಸಹಾಯ ಸಂಘಗಳು ರಾಷ್ಟ್ರೀಕೃತ ಹಾಗೂ ಸಹಕಾರ ಬ್ಯಾಂಕುಗಳು, ಧರ್ಮಸ್ಥಳ ಸಂಸ್ಥೆ ಕಿರುಸಾಲ ಸಂಸ್ಥೆಗಳು ಮುಂತಾದವುಗಳಿಂದ ಪಡೆದ ಸಾಲಗಳನ್ನು ಬಡ್ಡಿ ಸಹಿತ ಮನ್ನಾ ಮಾಡುವಂತೆ ಜನವಾದಿ ಮಹಿಳಾ ಸಂಘಟನೆ ಹಾಗೂ ಡಿ.ವೈ.ಎಪ್.ಐ. ಜಂಟಿಯಾಗಿ ಮುಖ್ಯಮಂತ್ರ್ರಿಗಳಲ್ಲಿ ಒತ್ತಾಯಿಸಿದೆ.

ತಹಶೀಲ್ದಾರ ಮೂಲಕ ಮನವಿ ರವಾನಿಸಿರುವ ಸಂಘಟನೆಯವರು ರಾಜ್ಯದಲ್ಲಿ ಸರ್ಕಾರ ಹಾಗೂ ಮೈಕ್ರೋ ಫೈನಾನ್ಸ್ ಸಂಸ್ಥೆಗಳು, ಧರ್ಮಸ್ಥಳ ಸಂಘಗಳ ಅಡಿಯಲ್ಲಿ ಉಳಿತಾಯ ಯೋಜನೆಯಲ್ಲಿ ತೊಡಗಿರುವ ಲಕ್ಷಾಂತರ ಸ್ತ್ರೀಶಕ್ತಿ, ಸ್ವ-ಸಹಾಯ ಸಂಘಗಳಿವೆ. ಸುಮಾರು 35 ರಿಂದ 40 ಲಕ್ಷ ಮಹಿಳೆಯರು ಈ ಸಂಘಗಳ ಸದಸ್ಯರಾಗಿ ತಮ್ಮ ಖರ್ಚು ವೆಚ್ಚಗಳಿಗೆ ಸಾಲ ಪಡೆಯುತ್ತಿದ್ದಾರೆ. ನಿಗದಿತ ಅವಧಿಯ ಕಂತು ಮತ್ತು ಬಡ್ಡಿಗಳನ್ನು ಚಟುವಟಿಕೆಗಳಿಂದ ಬರುವ ಆದಾಯದ ಮೂಲಕವೋ, ಇನ್ನಿತರ ಮಾರ್ಗದಲ್ಲಿ ಬರುವ ಅಲ್ಪ ಸ್ವಲ್ಪ ಆದಾಯದಿಂದಲೋ ಕಟ್ಟುತ್ತಾರೆ. ಬ್ಯಾಂಕುಗಳಿಂದ ಪಡೆದ ಸಾಲಗಳ ಕರಾರುವಾಕ್ ವಾಪಸಾತಿ ಈ ವಲಯದಿಂದ ಬರುತ್ತಿದೆ,

ಕೊರೊನಾ ಕಾರಣದ ಲಾಕ್ ಡೌನ್‍ನಿಂದಾಗಿ ಎಲ್ಲ ಕ್ಷೇತ್ರಗಳಂತೆಯೇ ಈ ವಿಭಾಗವೂ ನೆಲಕಚ್ಚಿದೆ. ಬಹುಪಾಲು ದುಡಿದು ತಿನ್ನುವ ಬಡ ಕೂಲಿಕಾರರೇ ಇರುವ ಸಂಘಗಳ ಸದಸ್ಯರು ದೈನಂದಿನ ದುಡಿಮೆಯನ್ನು ಕಳೆದುಕೊಂಡಿದ್ದಾರೆ. ಪ್ರತಿನಿತ್ಯದ ಒಂದು ಹೊತ್ತಿನ ಕೂಳಿಗೂ ಪರದಾಡುವ ಸ್ಥಿತಿಗೆ ಎಷ್ಟೋ ಕುಟುಂಬಗಳು ತಲುಪಿವೆ. ಬ್ಯಾಂಕುಗಳು, ಹಣಕಾಸು ಸಂಸ್ಥೆಗಳು ಇವರು ಪಡೆದ ಸಾಲಕ್ಕೆ ಶೇ. 18 ರಿಂದ ಶೇ. 24 ವರೆಗೆ ಚಕ್ರಬಡ್ಡಿ ಹಾಕುತ್ತಿವೆ. ದೊಡ್ಡ ಉದ್ದಿಮೆದಾರರಿಗೆ ಎಲ್ಲ ರೀತಿಯ ಸೌಲಭ್ಯಗ ಒದಗಿಸುವ ಸರಕಾರವು ಬಡ ಕೂಲಿಕಾರ, ದುಡಿದು ತಿನ್ನುವ ಮಹಿಳೆಯರ ನೆರವಿಗೆ ಧಾವಿಸುವ ಅಗತ್ಯವಿದೆ. ಇದು ಯಾವುದೇ ಸರಕಾರ ಮಾನವೀಯ ನೆಲೆಯಲ್ಲಿ ನಿಭಾಯಿಸಬೇಕಾದ ಕನಿಷ್ಟ ಹೊಣೆಗಾರಿಕೆ ಎಂದು ಸರಕಾರಕ್ಕೆ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಮತ್ತು ಡಿ.ವೈ.ಎಫ್.ಐ. ತಿಳಿಸಿದೆ.

ಈ ಸಂದರ್ಭದಲ್ಲಿ ಜನವಾದಿ ಮಹಿಲಾ ಸಂಘಟನೆಯ ಅಧ್ಯಕ್ಷೆ ರತ್ನದೀಪಾ ಮೊಕಾಶಿ, ಕಾರ್ಯದರ್ಶಿ ರೇಣುಕಾ ಉಪ್ಪಾರ್, ಡಿ.ವೈ.ಎಪ್.ಐ.ನ ಜಿಲ್ಲಾ ಕಾರ್ಯದರ್ಶಿ ಡಿ. ಸ್ಯಾಮಸನ್, ನಗರ ಕಾರ್ಯದರ್ಶಿ ಇಮ್ರಾನ ಖಾನ್, ಕಾಂತರಾಜು ಮುಂತಾದವರಿದ್ದರು.

Exit mobile version