Site icon ಒಡನಾಡಿ

ನಿವೃತ್ತಿಗೊಂಡ ಡಿ.ವೈ.ಎಸ್.ಪಿ. ಮೋಹನ ಪ್ರಸಾದರಿಗೆ ಬೀಳ್ಕೊಡುಗೆ

ದಾಂಡೇಲಿ: ಕಳೆದ ಎರಡುವರೆ ವರ್ಷಗಳಿಂದ ದಾಂಡೇಲಿ ಪೊಲೀಸ್ ಉಪ ವಿಭಾಗದಲ್ಲಿ ಆರಕ್ಷಕ ಉಪ ಅಧಿಕ್ಷರಾಗಿ ಸೇವೆ ಸಲ್ಲಿಸಿ ನಿವೃತ್ತಿಗೊಂಡ ಪಿ. ಮೋಹನಪ್ರಸಾದರನ್ನು ಬೀಳ್ಕೊಡುವ ಕಾರ್ಯಕ್ರಮ ಪೊಲೀಸ್ ಇಲಾಖೆಯ ಆಶ್ರಯದಲ್ಲಿ ನಗರದ ಜನತಾ ವಿದ್ಯಾಲಯದ ಸಭಾಂಗಣದಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ನಗರದ ಪೊಲೀಸ್ ಇಲಾಖೆಯವರು ಹಾಗೂ ಸಂಘ ಸಂಸ್ಥೆಯ ಪ್ರಮುಖರು ಡಿ.ವೈ.ಎಸ್.ಪಿ ಮೋಹನ ಪ್ರಸಾದ ದಂಪತಿಗಳನ್ನು ಸನ್ಮಾನಿಸಿ ಗೌರವಿಸಿದರು.
ಗೌರವ ಸ್ವೀಕರಿಸಿ ಮಾತನಾಡಿದ ಡಿ.ವೈ.ಸ್.ಪಿ. ಮೋಹನಪ್ರಸಾದ ತಮ್ಮ ವೃತ್ತಿ ಜೀವನದಲ್ಲಿ ದಾಂಡೇಲಿ ಪೊಲೀಸ್ ಉಪ ವಿಭಾಗ ಹಾಗೂ ಇಲ್ಲಿಯ ಸಿಬ್ಬಂದಿಗಳು ಮತ್ತು ನಾಗರಿಕರ ಸಹಕಾರವನ್ನು ಮರೆಯಲಾಗದಂತದ್ದು. ದಾಂಡೇಲಿ ಪೃಕೃತಿಯ ಮಡಿಲಲ್ಲಿರುವ ಸುಂದರ ಪ್ರದೇಶ. ಇಲ್ಲಿ ಕರ್ತವ್ಯ ನಿರ್ವಹಿಸಿದ್ದೇ ನನ್ನ ಭಾಗ್ಯ. ಪೊಲೀಸ್ ಕೆಲಸ ಎಂದರೆ ಬಹಳ ಜವಾಬ್ದಾರಿಯುತವಾದುದು. ಇಲ್ಲಿ ಕೆಲವೊಮ್ಮೆ ಗೊತ್ತಿದ್ದೋ ಗೊತ್ತಿಲ್ಲದೆಯೋ ಸರಿ-ತಪ್ಪುಗಳು ನಡೆದಿರುತ್ತವೆ. ಅವೆವೆಲ್ಲವನ್ನೂ ಸರಿದೂಗಿಸಿಕೊಂಡು ಸಕಾರಾತ್ಮಕವಾಗಿ ತೆಗೆದುಕೊಂಡು ಹೋಗುವುದೇ ಒಬ್ಬ ಅಧಿಕಾರಿಯ ಕರ್ತವ್ಯವಾಗಿರುತ್ತದೆ ಎಂದು ಹೇಳಿ ತಮ್ಮ ವೃತ್ತ ಜೀವನದಲ್ಲಿ ನಡೆದ ಕೆಲ ಘಟನೆಗಳನ್ನು ನೆನಪಿಸಿಕೊಂಡರು.

ಹಳಿಯಾಳ ಸಿ.ಪಿ.ಐ ಬಿ.ಎಸ್. ಲೋಕಾಪುರ ಪ್ರಾಸ್ತಾವಿಕ ಮಾನಾಡಿ ಪಿ. ಮೋಹನ ಪ್ರಸಾದರು ಸಿಬ್ಬಂದಿಗಳ ಜೊತೆ ಅನ್ಯೋನ್ಯವಾಗಿದ್ದರು, ಅವರಲ್ಲಿರುವ ಅನುಭವಗಳನ್ನು ನಾವೆಲ್ಲ ಪಡೆದಕೊಳ್ಳುವಂತಾಗಿದೆ ಎಂದರು.
ಹಿರಿಯ ಪತ್ರಕರ್ತ ಯು.ಎಸ್. ಪಾಟೀಲ, ಭಾ.ಜ.ಪ ಪ್ರಧಾನ ಕಾರ್ಯದರ್ಶಿ ಗುರು ಮಠಪತಿ, ದಾಂಡೇಲಿ ಪ್ರೆಸ್ ಕ್ಲಬ್ ಅಧ್ಯಕ್ಷ ಬಿ.ಎನ್. ವಾಸರೆ, ನಗರಸಭೆ ಮಾಜಿ ಅಧ್ಯಕ್ಷ ತಸವರ ಸೌದಾಗರ, ಭಾ.ಜ.ಪ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ವಿಷ್ಣು ನಾಯರ್, ಎ.ಎಸ್.ಐ ಮಹಾವೀರ ಕಾಂಬಳೆ ಮುಂತಾದವರು ಅಭಿನಂದಿಸಿ ಮಾತನಾಡಿದರು.

ದಾಂಡೇಲಿ ವೃತ್ತ ನಿರೀಕ್ಷಕ ಪ್ರಭು ಗಂಗನಳ್ಳಿ ಸ್ವಾಗತಿಸಿದರು. ದಾಂಡೇಲಿ ನಗರ ಠಾಣೆಯ ಪಿ.ಎಸ್.ಐ ಯಲ್ಲಪ್ಪ ಎಸ್. ವಂದಿಸಿದರು. ಗ್ರಾಮೀಣ ಠಾಣೆಯ ಪಿ.ಎಸ್.ಐ ಹನ್ಮಂತ ಬಿರಾದರ, ಅಪರಾಧ ವಿಭಾಗದ ಪಿ.ಎಸ್.ಐ ಮಹಾದೇವಿ ನಾಯ್ಕೋಡಿ, ಅಂಬಿಕಾಗರ ಪಿ.ಎಸ್.ಐ ಉಲ್ಲಾಸ ಪರಿವಾರ, ಜೋಯಿಡಾ ಪಿ.ಎಸ್.ಐ ಲಕ್ಷ್ಮಣ ಪೂಜಾರಿ, ರಾಮನಗರ ಅಪರಾಧ ವಿಭಾಗದ ಪಿ.ಎಸ್.ಐ. ಮಂಜುಳಾ ರಾವೋಜಿ ಉಪಸ್ಥಿತರಿದ್ದರು.
ಸಿಬ್ಬದಿಗಳಾದ ಬಸವರಾಜ ನಾಯ್ಕ, ಪ್ರಶಾಂತ, ನಾರಾಯಣ ರಾಠಾಡ ಮುಂತಾದವರು ಸಂಘಟನೆಯಲ್ಲಿ ಸಹಕರಿಸಿದರು. ಪತ್ರಕರ್ತ ಸಂದೇಶ ಜೈನ್‌ ನಿರೂಪಿಸಿದರು.

Exit mobile version