Site icon ಒಡನಾಡಿ

ವರ್ಗಾವಣೆಗೊಂಡ ಮುಖ್ಯಾದ್ಯಾಪಕಿ ಸಿಸ್ಟರ್ ರೆನಿಟಾರಿಗೆ ಬೀಳ್ಕೊಡುಗೆ


ದಾಂಡೇಲಿ: ನಗರದ ಸೆಂಟ್ ಮೈಕಲ್ ಪ್ರೌಢ ಶಾಲೆಯಲ್ಲಿ ಕಳೆದ ಏಳು ವರ್ಷಗಳಿಂದ ಮುಖ್ಯಾದ್ಯಾಪಕಿಯಾಗಿ ಸೇವೆ ಸಲ್ಲಿಸಿ ಇದೀಗ ಗದಗಕ್ಕೆ ವರ್ಗಾವಣೆಗೊಂಡಿರುವ ಸಿಸ್ಟರ್ ರೆನಿಟಾ ಪಿಂಟೋರವರಿಗೆ ಪಾಲಕರ ಸಂಘಟನೆಯಿಂದ ಸನ್ಮಾನಿಸಿ ಬೀಳ್ಕೊಡುವ ಕಾರ್ಯಕ್ರಮ ರವಿವಾರ ನಡೆಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಸಿಸ್ಟರ್ ರೆನಿಟಾ ಪಿಂಟೋರವರು ದೇವರು ನನಗೆ ವಿಶ್ವ ಕುಟುಂಭವನ್ನು ನೀಡಿದ್ದಾನೆ. ನನಗೆ ಮಕ್ಕಳಿಲ್ಲ. ಹಾಗಾಗಿ ನನ್ನ ವಿದ್ಯಾರ್ಥಿಗಳೆ ನನಗೆ ಮಕ್ಕಳು. ದಾಂಡೇಲಿಯಲ್ಲಿ ಏಳುವರ್ಷಗಳ ಕಾಲ ಸಲ್ಲಿಸಿದ ಸೇವೆ ನನಗೆ ನೆಮ್ಮದಿ ಹಾಗೂ ಖುಶಿಯನ್ನು ಕೊಟ್ಟಿದೆ. ನನ್ನ ಜೀವನದ ಪಯಣದಲ್ಲಿ ದಾಂಡೇಲಿ ನನಗೆ ಮರೆಯಲಾಗದ ಸ್ಥಳ ಎಂದರು.
ಶಾಲಾ ಪಾಲಕ, ಶಿಕ್ಷಕ ಸಂಘಟನೆಯ ಉಪಾಧ್ಯಕ್ಷ ರಿಯಾಜ್ ಸಯ್ಯದ್, ಪಾಲಕ ಪ್ರತಿನಿದಿಗಳಾದ ಪತ್ರಕರ್ತ ಬಿ.ಎನ್. ವಾಸರೆ, ನ್ಯಾಯವಾದಿ ಸೋಮಕುಮಾರ ಎಸ್., ನಿವೃತ್ತ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ವೈ.ಎನ್. ಮುನವಳ್ಳಿ, ಗುತ್ತಿಗೆದಾರ ಮುಸ್ತಾಕ ಮಿಶ್ರಿಕೋಟಿ ಸಾಂಧರ್ಬಿಕವಾಗಿ ಮಾತನಾಡಿ ಸಿಸ್ಟರ್ ರೆನಿಟಾರವರ ವ್ಯಕ್ತಿತ್ವ ಹಾಗೂ ಅವರ ಶಿಸ್ತಿನ ವೃತ್ತಿ ಬದುಕಿನ ಬಗೆ ಪ್ರಶಂಶಿಸಿದರು. ಪ್ರಭಾರಿ ಮುಖ್ಯಾದ್ಯಾಪಕಿಯಾಗಲಿರುವ ಸಿಸ್ಟರ್ ಸೆಲ್ವಿ ಮಾತನಾಡಿದರು.
ಪಾಲಕರ ಸಂಘಟನೆಯ ಅಧ್ಯಕ್ಷ ರಿಯಾಜ ಸಯ್ಯದ್ ಸ್ವಾಗತಿಸಿದರು. ಉದ್ಯಮಿ ರಫಿಕ್ ಖಾನ್ ವಂದಿಸಿದರು. ನ್ಯಾಯವಾದಿ ಎಸ್. ಸೋಮಕುಮಾರ ನಿರೂಪಿಸಿದರು. ಪಾಲಕ ಪ್ರತಿನಿದಿಗಳಾದ ಇಮಾಮ ಸರವರ, ಉಮೇಶ ಗುಂಡುಪಕರ, ಧರ್ಮೇಶ ಪಟೇಲ, ಪ್ರಾನ್ಸಿಸ್ ಮಸ್ಕರಿನ್, ರಾಜು ಸರವರ ಹಾಗೂ ಶಾಲಾ ಸಿಬ್ಬಂದಿಗಳು ಉಪಸ್ಥಿತರಿದ್ದರು.

Exit mobile version