ದಾಂಡೇಲಿ: ನಗರದಲ್ಲಿ ಪ್ರಪ್ರಥಮ ಬಾರಿಗೆ ಪ್ರಧಾನಮಂತ್ರಿ ಜನೌಷಧಿ ಕೇಂದ್ರ ಆರಂಭವಾಗಿದ್ದು, ಪೌರಾಯುಕ್ತರಾದ ಡಾ. ಸಯ್ಯದ್ ಜಾಹೇದ್ ಅಲಿಯವರು ಈ ಕೇಂದ್ರವನ್ನು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಶುಭಾಶಯಕೋರಿ ಮಾತನಾಡಿದ ಅವರು ಜನೌಷಧಿ ಕೇಂದ್ರದಲ್ಲಿ ಬಹಳಷ್ಟು ರಿಯಾಯತಿ ದರದಲ್ಲಿ ಔಷಧಿಗಳು ದೊರೆಯುತ್ತಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದರು.
ನಗರದ ಜೆ.ಎನ್.ರಸ್ತೆಯ ಡಾ. ಹಿರೇಮಠ ಬಿಲ್ಡಿಂಗ್‍ನ ಮಳಿಗೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ನಗರಸಭಾ ಸದಸ್ಯರಾದ ತಹಶೀಲ್ದಾರ ಶೈಲೇಶ ಪರಮಾನಂದ, ಆದಂ ದೇಸೂರ, ಮೋಹನ ಹಲವಾಯಿ, ದಶರಥ ಬಂಡಿವಡ್ಡರ, ನರೇಂದ್ರ ಚೌಹಾಣ, ಆಸಿಪ್ ಮುಜಾವರ, ಅಷ್ಪಾಕ ಶೇಖ, ಅನಿಲ್ ನಾಯ್ಕರ, ±ಹಿದಾ ಪಠಾಣ ಸಪೂರಾ ಯರಗಟ್ಟಿ, ಪ್ರೀತಿ ನಾಯರ್, ರುಕ್ಮಿಣಿ ಬಾಗಡೆ, ಮೌಲಾಲಿ ಮುಲ್ಲಾ, ಮಜೀದ ಸನದಿ, ಯಾಸ್ಮಿನ್ ಕಿತ್ತೂರ, ಮಾಜಿ ನಗರಸಭಾ ಸದಸ್ಯರಾದ ಡಿ. ಸ್ಯಾಮಸನ್, ರಾಮಲಿಂಗ್ ಜಾಧವ್, ಮಹಮ್ಮದ್ ಪಣಿಬಂದ್ ಹಾಗೂ ನಗರದ ಪ್ರಮುಖರನೇಕರು ಭಾಗವಹಿಸಿದ್ದರು.
ಪ್ರಧನ ಮಂತ್ರಿ ಜನೌಷಧಿ ಕೇಂದ್ರದ ದಾಂಡೇಲಿ ಶಾಖೆಯ ಮಾಲಕರಾದ ಸಂಜಯ ನಂದ್ಯಾಳಕರವರು ಸ್ವಾಗತಿಸಿ, ನಿರೂಪಿಸಿದರು.