Site icon ಒಡನಾಡಿ

ಖಾಸಗಿ ಆಸ್ಪತ್ರೆಯಲ್ಲಿಯೂ ಕೊರೊನಾ ಚಿಕಿತ್ಸೆ ಉಚಿತಗೊಳಿಸಿ

ದಾಂಡೇಲಿ; ಸರಕಾರ ಖಾಸಗಿ ಆಸ್ಪತ್ರೆಗಳಲ್ಲಿ ಕೊರೊನಾ ಚಿಕಿತ್ಸೆ ಅವಕಾಶ ನೀಡುವ ಮಾತನಾಡಿದ್ದು, ಇದು ಜನರ ಮೇಲೆ ಹೊರೆಯಾಗಲಿದೆ. ಹಾಗಾಗಿ ಖಾಸಗಿ ಆಸ್ಪತ್ರೆಯಲ್ಲಿಯೂ ಸಹ ಕೊರೊನಾ ಚಿಕಿತ್ಸೆ ಉಚಿತಗೊಳಿಸುವಂತೆ ಒತ್ತಾಯಿಸಿ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ (ಡಿವೈಎಪ್‌ಐ) ಮುಖ್ಯಮಂತ್ರಿಗಳಿಗೆ ತಹಶೀಲ್ದಾರ ಮೂಲಕ ಮನವಿ ಮಾಡಿದೆ.

ಕೊರೊನಾ ಇದು ಜನ ಸಾಮಾನ್ಯರ ಪಾಲಿಗೆ ಕಂಟಕವಾಗಿ ಪರಿಣಮಿಸಿದೆ. ಹೋಗಿರುವಾಗ ಖಾಸಗಿ ಆಸ್ಪತ್ರೆಯ ಶುಲ್ಕ ಅವರಿಂದ ಭರಿಸುವುದು ಅಸಾದ್ಯವಾಗಲಿದೆ. ಸರಕಾರ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ದರ ನಿಗದಿ ಪಡಿಸಿದ್ದು, ಅದೂ ದುಬಾರಿಯಾಗಲಿದೆ. ಸಾಮಾನ್ಯ ಚಿಕಿತ್ಗೆಸೆಗೆ 10 ಸಾವಿರ, ಆಮ್ಲಜನಿಕ ಸಹಿತ ವಾರ್ಡನಲ್ಲಿ 12 ಸಾವಿರ, ಐ.ಸಿ.ಯು. ನಲ್ಲಿ 15 ಸಾವಿರ, ವೆಂಟಿಲೇಟರ್‍ನಲ್ಲಿ 25 ಸಾವಿರ ರೂ ಗಳಂತೆ ದರ ನಿಗದಿ ಪಡಿಸಿದ್ದು, ಇದು ಬಡವರಿಗೆ ಬಹಳ ಕಷ್ಠವಾಗಲಿದೆ.
ಆರೋಗ್ಯ ಕರ್ನಾಟಕ ಯೋಜನೆಡಡಿ ಒಂದಿಷ್ಟು ರಿಯಾಯತಿ ನೀಡಿದರೂ ಗ್ರಾಮೀಣ ಹಾಘು ನಗರ ಪ್ರಧೆಶದ ಬಹುಜನರು ಆಯುಷ್ಮಾನ ಬಾರತ, ಆರೋಗ್ಯ ಕರ್ನಾಟಕ ಯೋಜನೆ ವ್ಯಾಪ್ತಿಗೊಳಪಟ್ಟಿರುವುದಿಲ್ಲ. ಈಗಾಗಲೇ ಕೊರೊನಾ ಲಾಕ್‍ಡೌನ್‍ನಿಂದ ಜನರು ಉದ್ಯೋಗವಿಲ್ಲದೇ ಸಂಕಷ್ಠಕ್ಕೊಳಗಾಗಿದ್ದಾರೆ. ಸೋಂಕಿತರು ಸರಕಶರ ನಿಗದಿ ಪಡಿಸದ ದರದಂತೆ 10 ಸಾವಿರ ರೂ.ಗಳಂತೆಯೇ ಲೆಕ್ಕ ಹಾಕಿದರೂ ಕನಿಷ್ಟ 10ದಿನಕ್ಕೆ ಒಂದು ಲಕ್ಷ ರೂ.ಗಳಷ್ಟಾಗುತ್ತದೆ.

ಕಾರಣ ಈ ವರದಿಯನ್ನು ತಕ್ಷಣ ರದ್ದುಗೊಳಿಸಿ ಖಾಸಗಿ ಆಸ್ಪತ್ರೆಯಲ್ಲಿಯೂ ಸಹ ಬಡವರಿಗೆ ಉಚಿತ ಕೊರೊನಾ ಚಿಕಿತ್ಸೆ ನೀಡುವಂತೆ ಕ್ರಮ ಕೈಗೊಳ್ಳಬೇಕೆಂದು ಡಿ.ವೈ.ಎಪ್.ಐ.ನ ಜಿಲ್ಲಾ ಕಾರ್ಯದರ್ಶಿ ಡಿ. ಸ್ಯಾಮಸನ್, ನಗರದ ಕಾರ್ಯದರ್ಶಿ ಇಮ್ರಾನ ಖಾನ್, ಕಾಂತರಾಜ, ದಾಮೋದರ ಶೆಟ್ಟಿ, ಸೊಲೊಮನ ರಾಜ ಮುಂತಾದವರು ಮನವಿ ಮಾಡಿದ್ದಾರೆ.

Exit mobile version