Site icon ಒಡನಾಡಿ

ಖಜಾನೆಯಲ್ಲಿ ಗುತ್ತಿಗೆದಾರರ ಬಿಲ್ಲು ಪಾವತಿಸಲು ಅನುಮತಿಸಿ: ಮುಖ್ಯಮಂತ್ರಿಗಳಿಗೆ ಮನವಿ

ದಾಂಡೇಲಿ: ಮಾರ್ಚ ತಿಂಗಳಿಂದ ಇಲ್ಲಿಯವರೆಗೂ ಗುತ್ತಿಗೆದಾರರು ನಿರ್ವಹಿಸಿರುವ ಕಾಮಗಾರಿಗಳ ಬಿಲ್ಲು ಪಾವತಿಯಾಗಿರುವುದಿಲ್ಲ. ನಗರ ಸ್ಥಳೀಯ ಸಂಸ್ಥೆಗಳಲ್ಲಿ, ಲೋಕೋಪಯೋಗಿ, ಜಿಲಾ ್ಲಪಂಚಾಯತ್‍ಗಳಲ್ಲಿ ಹಣವಿದ್ದರೂ ಸರಕಾರದ ಆದೇಶದಂತೆ ಖಜಾನೆಗಳಲ್ಲಿ ಗುತ್ತಿಗೆದಾರರ ಬಿಲ್ಲುಗಳನ್ನು ಪಡೆಯುತ್ತಿಲ್ಲ. ಕಾರಣ ಖಜಾನೆಯಲ್ಲಿ ಗುತ್ತಿಗೆದಾರರ ಬಿಲ್ಲನ್ನು ಪಾವತಿಸಲು ಅನುಮತಿಸಿ ಆದೇಶಿಸಬೇಕೆಂದು ಒತ್ತಾಯಿಸಿ ಕೆನರಾ ಲೋಕೋಯೋಗಿ ಗುತ್ತಿಗೆದಾರರ ಸಂಘದವರು ತಹಶೀಲ್ದಾರರ ಮೂಲಕ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದ್ದಾರೆ.
ಖಜಾನೆಯಲ್ಲಿ ಗುತ್ತಿಗೆದಾರರ ಬಿಲ್ ಪಾವತಿಯಾಗದ ಕಾರಣ, ಗುತ್ತಿಗೆ ಕೆಲಸ ಮಾಡಿದ ಗುತ್ತಿಗೆದಾರರು ಹಾಗೂ ಅವರಿಗೆ ಅವಲಂಭಿತರಾಗಿರುವ ಕೂಲಿ ಕಾರ್ಮಿಕರು ಗುತ್ತಿಗೆ ಕೆಲಸಕ್ಕೆ ಬಳಸುವ ಇತರೆ ಸರಕು ವ್ಯಾಪಾರಿಗಳು ಎಲ್ಲರೂ ತೊಂದರೆಗೊಳಗಾಗಿದ್ದಾರೆ. ಹಾಗಾಗಿ ಗುತ್ತಿಗೆದಾರರ ಬಿಲ್‍ನ್ನು ತಕ್ಷಣ ಪಾವತಿಸುವಂತೆ ಹಾಗೂ ಸಂಬಂದಪಟ್ಟ ಇಲಾಖೆಗಳಲ್ಲಿ ಹಣದ ಕೊರತೆಯಿದ್ದರೆ ಅವರಿಗೆ ಹಣ ಬಿಡುಗಡೆಗೊಳಿಸಿ ಗುತ್ತಿಗೆದಾರರು ಹಾಗೂ ಅವರÀ ಅವಲಂಭಿತರಿಗೆ ಸಹಾಯ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಸಂಘದ ಪ್ರದಾನ ಕಾರ್ಯದರ್ಶಿ ಬಿ.ಎಲ್. ಲಮಾಣಿ, ಖಜಾಂಚಿ ಕೆ. ಸುಧಾಕರ ರೆಡ್ಡಿ, ಗುತ್ತಿಗೆದಾರರಾದ ಗೌಸ್‍ಪೀರ್, ರವಿಶಂಕರ, ಜನ್ನು, ಎಮ್. ಸುಬ್ರಮಣಿ, ಶರಣಪ್ಪ ಮುರಡಿ, ಅನಿರುದ್ದನ್, ದೇವಾನಂದ ಆರ್.ಸಿ. ಆನಂದ ಟಿ., ಗೌಸ ಖಲೀಪ್, ಸುಹೇಲ ಗೌಸ ಪೀರ ಮುಂತಾದವರಿದ್ದರು.

Exit mobile version