Site icon ಒಡನಾಡಿ

17 ವಿಶೇಷ ಚೇತನರಿಗೆ ಮೂರು ಚಕ್ರದ ಸ್ಕೂಟಿ ವಿತರಿಸಿದ ದೇಶಪಾಂಡೆ

ಸ್ಕೂಟಿ ವಿತರಣೆ

ದಾಂಡೇಲಿ: ನಗರಸಭೆಯ ಎಸ್.ಎಪ್.ಸಿ. ನಿಧಿಯ 24.10 ರ ಅಂಗವಿಕಲರ ಕಲ್ಯಾಣ ಕಾರ್ಯಕ್ರಮದಡಿಯಲ್ಲಿ ಸರಿ ಸುಮಾರು 14 ಲಕ್ಷ ರು. ವೆಚ್ಚದಲ್ಲಿ ನಗರದ ಆಯ್ದ 17 ವಿಶೇಷ ಚೇತನರಿಗೆ ನೀಡಲಾದ ಮೂರು ಚಕ್ರಗಳ ಸ್ಕೂಟಿಯನ್ನು ಶಾಸಕ ಆರ್.ವಿ. ದೇಶಪಾಂಡೆಯವರು ಶನಿವಾರ ನಗರಸಭೆ ಆವರಣದಲ್ಲಿ ವಿತರಿಸಿದರು.


ಈ ಸಂದರ್ಭದಲ್ಲಿ ಮಾತನಾಡಿದ ಅವರು ಸರಕಾರದಿಂದ ನೀಡಲ್ಪಟ್ಟ ಈ ವಾಹನವನ್ನು ವಿಶೇಷ ಚೇತನರು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ತಹಶೀಲ್ದಾರ ಶೈಲೇಶ ಪರಮಾನಂದ, ಪೌರಾಯುಕ್ತ ಡಾ. ಸಯ್ಯದ್ ಜಾಹೇದ್ ಅಲಿ, ತಾ.ಪಂ ಕಾರ್ಯ ನಿರ್ವಹಣಧಿಕಾರಿ ಪರಶುರಾಮ ಗಸ್ತಿ, ನಗರಸಭಾ ಸದಸ್ಯರಾದ ಅದಂ ದೇಸೂರ, ಯಾಸ್ಮಿನ್ ಕಿತ್ತೂರ, ಮಜೀದ ಸನದಿ, ಅಷ್ಪಾಕ ಶೇಖ, ಆಸಿಪ್ ಮುಜಾವರ, ರುಕ್ಮಿಣಿ ಬಾಗಡೆ, ಸಂಜಯ ನಂದ್ಯಾಳಕರ, ಅನಿಲ್ ನಾಯ್ಕರ, ಸರಸ್ವತಿ ರಜಪೂತ, ಪ್ರೀತಿ ನಾಯರ್, ವೆಂಕಟರಮಣಮ್ಮ ಮೈತಕುರಿ, ಶಿಲ್ಪಾ ಕೋಡೆ, ಸಪೂರಾ ಯರಗಟ್ಟಿ, ಶಾಯಿದಾ ಪಠಾಣ, ನೀಲವ್ವ ಬಂಡಿವಡ್ಡರ್ ಹಾಗೂ ನಗರದ ಪ್ರಮುಖರನೇಕರಿದ್ದರು.

Exit mobile version