Site icon ಒಡನಾಡಿ

ಚೀನಾ ದೇಶದ ಕೃತ್ಯವನ್ನು ಸಹಿಸುವುದಿಲ್ಲ : ದಾಂಡೇಲಿ ಭಾ.ಜ.ಪ. ಎಚ್ಚರಿಕೆ

ಹುತಾತ್ಮ ಹೋಧರಿಗೆ ದಾಂಡೇಲಿ ಭಾಜಪ ಶೃದ್ದಾಂಜಲಿ


ದಾಂಡೇಲಿ: ಪೂರ್ವ ಲಡಾಕ್‍ನ ಗುಲ್ವಾನ ಕಣಿವೆಯಲ್ಲಿ ಚೀನಾ ದೇಶವು ಭಾರತೀಯ ಸೇನೆಯ ಮೇಲೆ ದಾಳಿ ನಡೆಸುವ ಮೂಲಕ ಭಾರತೀಯರ ಸ್ವಾಭಿಮಾನವನ್ನು ಕೆರಳಿಸಿದೆ. ಇದನ್ನು ಈದೇಶವಾಸಿಗಳಾಗಿ ನಾವು ಸಹಿಸಲಸಾದ್ಯವಾದುದು. ಚೀನಾ ದೇಶದ ಉತ್ಪಾದನೆಗಳನ್ನು ಬಹಿಷ್ಕರಿಸುವ ಮೂಲಕ ನಾವು ಆ ದೇಶಕ್ಕೆ ಪಾಠ ಕಲಿಸಬೇಕು ಎಂದು ಭಾರತೀಯ ಜನತಾ ಪಕ್ಷದ ಹಿರಿಯ ಮುಖಂಡ ವಾಸುದೇವ ಪ್ರಭು ನುಡಿದರು.


ಅವರು ದಾಂಡೇಲಿಯ ಸೋಮಾನಿ ವೃತ್ತದಲ್ಲಿ ಭಾ.ಜ.ಪ ಆಯೋಜಿಸಿದ್ದ ಗುಲ್ವಾನ ಕಣಿವೆಯಲ್ಲಿ ಚೀನಾ ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ಶೃದ್ದಾಂಜಲಿ ಸಲ್ಲಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು. ಹುತಾತ್ಮರಾದ ಯೋಧರಲ್ಲಿ ಪ್ರತಿಯೊಬ್ಬ ಭಾರತೀಯನಿದ್ದಾನೆ. ನಾವು ಅವರ ಜೊತೆ ಇದ್ದೇವೆ ಎಂದ ಅವರು ದೇಶದ ಸ್ವಾಭಿಮಾನವನ್ನು ಕೆಡಿಸುವ ಕೆಲಸವನ್ನು ಯಾರೇ ಮಾಡಿದರೂ ನಾವು ಅವರ ವಿರುದ್ದ ಹೋರಾಡುವುದು ಅನಿವಾರ್ಯವಾಗುತ್ತದೆ ಎಂದರು.


ಭಾ.ಜ.ಪ ಅಧ್ಯಕ್ಷ ಚಂದ್ರಕಾಂತ ಕ್ಷೀರಸಾಗರ, ಪ್ರಧಾನ ಕಾರ್ಯದರ್ಶಿ ಗುರು ಮಠಪತಿ ಮಾತನಾಡಿ ಇನ್ನು ಮುಂದೆ ಸ್ವಾಭಿಮಾನಿ ಬಾರತೀಯರಾದ ನಾವು ಚೀನಾ ದೇಶದ ಯಾವ ವಸ್ತುಗಳನ್ನೂ ಕೂಡಾ ಬಳಸಬಾರದು ಎಂದು ಹೇಳಿ ಚೀನಾದ ಕೃತ್ಯವನ್ನು ಖಂಡಿಸಿದರು. ಪಕ್ಷದ ಮುಖಂಡರು, ವಿವಿಧ ಮೋರ್ಚಾಗಳ ಅಧ್ಯಕ್ಷರು, ಕಾರ್ಯದರ್ಶಿಗಳು ನಗರಸಭಾ ಸದಸ್ಯರು, ಪ್ರಮುಖರು ಭಾಗವಹಿಸಿದ್ದರು.


ಆರಂಭದಲ್ಲಿ ಛತ್ರಪತಿ ಶಿವಾಜಿ ಪುತ್ಥಳಿಗೆ ಹಾರಾರ್ಪಣೆ ಮಾಡಿದ ಭಾ.ಜ.ಪ ಕಾರ್ಯಕರ್ತರು ನಂತರ ಒಂದು ನಿಮಿಷದ ಮೌನಾಚರಣೆ ಮಾಡಿ ಹುತಾತ್ಮ ಯೋಧರಿಗೆ ಶೃದ್ದಾಂಜಲಿ ಸಲ್ಲಿಸಿದರು. ತದ ನಂತರ ಚೀನಾ ಉತ್ಪಾದಿತ ವಸ್ತುಗಳನ್ನು ಸುಡುವ ಮುಲಕ ಚೀನಾ ದೇಶದ ಕೃತ್ಯವನ್ನು ಖಂಡಿಸಿದರು. ಹಾಗೂ ಚೀನಾ ವಸ್ತುಗಳನ್ನು ಬಹಿಷ್ಕರಿಸುವುದಾಗಿ, ಸ್ವದೇಶ ವಸ್ತುಗಳನ್ನೇ ಬಳಸುವುದಾಗಿ ಪ್ರತಿಜ್ಞೆ ಮಾಡಿದರು.

Exit mobile version