ಹಳಿಯಾಳ: ಹಳಿಯಾಳ ತಾಲೂಕಿನಲ್ಲಿ ಗುರುವಾರ ಎಂಟು ವರ್ಷದ ಬಾಲಕನಲ್ಲಿ ಕೊರೊನಾ ಸೋಂಕು ದೃಢವಾಗಿದ್ದು, ಇದರಿಂದಾಗಿ ತಾಲೂಕಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಆರಕ್ಕೇರಿಂತಾಗಿದೆ.
ಇದು ಮಹಾರಾಷ್ಟ್ರ ಸಂಪರ್ಕದ ಸೋಂಕು ಎನ್ನಲಾಗಿದ್ದು, ಪಟ್ಟಣದ ಸಿದ್ದರಾಮೇಶ್ವರ ಗಲ್ಲಿಯ ಬಾಲಕನಾಗಿದ್ದು ಈತನ ತಾಯಿ ಕೆಲ ದಿನಗಳ ಹಿಂದೆ ಕೊರೊನಾ ಸೋಂಕಿಗೊಳಗಾಗಿ ಕಾರವಾರದ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಮಗು ವಿಶೇಷಚೇತನವುಳ್ಳ ಮಗು ಎಂಬ ಮಾಹಿತಿ ಲಭ್ಯವಾಗಿದ್ದು ಗುರುವಾರ ಸಂಜೆ ಈ ಬಾಲಕಕನನ್ನೂ ಸಹ ಕಾರವಾರದ ಕಿಮ್ಸ್‌ನ ಕೊವಿಡ್ 9 ವಾರ್ಡಗೆ ಸಾಗಿಸಲಾಗಿದೆ.
ಈ ಬಾಲಕನ ಪ್ರಥಮ ಹಾಗೂ ದ್ವಿತೀಯ ಸಂಪರ್ದಕದಲ್ಲಿದ್ದವರ ಮಾಹಿತಿಯನ್ಣು ಕಲೆ ಹಾಕಲಾಗಿದ್ದು, ಅವರ ಗಂಟಲು ದ್ರವದ ಪರೀಕ್ಷಾ ವರದಿಗಾಗಿ ಆಡಳಿತ ಕಾಯುತ್ತಿದೆ.