Site icon ಒಡನಾಡಿ

ಪ್ರವಾಸಿಗರ ಆಧಾರ ಮಾಹಿತಿ ಕಡ್ಡಾಯ : ರೆಸಾರ್ಟ ಹೋಮ್‍ಸ್ಟೇ ಮಾಲಕರಿಗೆ ತಹಶೀಲ್ದಾರ ಸೂಚನೆ

ದಾಂಡೇಲಿ: ರೆಸಾರ್ಟ, ಹೋಮ್ ಸ್ಟೇಗಳಿಗೆ ಹೊರ ಪ್ರದೇಶಗಳಿಂದ ಬರುವ ಪ್ರವಾಸಿಗರ ಆಧಾರ ಕಾರ್ಡ ಮಾಹಿತಿಯನ್ನು ಕಡ್ಡಾಯವಾಗಿ ಪಡೆದುಕೊಳ್ಳಬೇಕು. ಪ್ರವಾಸಿಗರ ನಿಖರ ಮಾಹಿತಿಯನ್ನು ದಾಖಲಿಸಿಕೋಳ್ಳಬೇಕು ಎಂದು ದಾಂಡೇಲಿ ತಹಶಿಲ್ದಾರ್ ಶೈಲೇಶ ಪರಮಾನಂದರವರು ರೆಸಾರ್ಟ ಹಾಗೂ ಹೋಮ್ ಸ್ಟೇ ಮಾಲಕರಿಗೆ ಲಿಖಿತ ನಿರ್ದೇಶನ ನೀಡಿದ್ದಾರೆ.
ಕೇಂದ್ರ ಹಾಗೂ ರಾಜ್ಯ ಸರಕಾರದ ನಿರ್ದೇಶನದಂತೆ ಕೋವಿಡ್ 19 ವೈರಾಣು ತಡೆಗಟ್ಟಲು ಹೊರರಾಜ್ಯದಿಂದ ಆಗಮಿಸುವವರಿಗೆ ಸಾಂಸ್ಥಿಕ ಅಥವಾ ಹೋಂ ಕ್ವಾರೆಂಟೈನ್ ಮಾಡಬೇಕೆಂದಿದೆ. ರಾಜ್ಯ ಸರಕಾರ ಜಂಗಲ್ ಲಾಡ್ಜ್, ರೆಸಾರ್ಟ ಹೋಮ್ ಸ್ಟೇ ಪ್ರಾರಭಿಸಲು ಶರತ್ತು ಬದ್ದ ಅನುಮತಿ ನೀಡಿದೆ. ಹಾಗಾಗಿ ದಾಂಡೇಲಿ ತಾಲೂಕು ವ್ಯಾಪ್ತಿಯ ರೆಸಾರ್ಟ ಹೋಮ್ ಸ್ಟೇ ಮಾಲಕರು, ನಗರ ವ್ಯಾಪ್ತಿಯ ವಸತಿ ಗ್ರಹಗಳ ಮಾಲಕರು ಹೊರ ರಾಜ್ಯ ಮತ್ತು ಜಿಲ್ಲೆಗಳಿಂದ ಆಗಮಿಸುವ ಪ್ರವಾಸಿಗರ ಮಾಹಿತಿ ಪಡೆದುಕೊಳ್ಳಬೇಕು. ಪ್ರವಾಸಿಗರ ಆಧಾರ ಕಾರ್ಡ ಪ್ರತಿಯನ್ನು ಕಡ್ಡಾಯವಾಗಿ ಪಡೆಯಬೇಕು. ಗ್ರಾಮ ಪಂಚಾಯತ್ ವ್ಯಾಪ್ತಿಯ ರೆಸಾರ್ಟ ಹೋಮ್ ಸ್ಟೇ ಮಾಲಕರು ಪಂಚಾಯತ್ ವ್ಯಾಪ್ತಿಯಲ್ಲಿ ಈಗಾಗಲೇ ನೇಮಿಸಿರುವ ಗ್ರಾಮ ಕಾವಲು ಸಮಿತಿಗೆ ಅಥವಾ ಗ್ರಾಮ ಪಂಚಾಯತ್‍ಗೆ ಹಾಗೂ ನಗರ ವ್ಯಾಪ್ತಿಯಲ್ಲಿ ವಾರ್ಡನ ಕಾವಲು ಸಮಿತಿಗೆ ಪ್ರತಿದಿನ ತಪ್ಪದೇ ಮಾಹಿತಿ ನೀಡಬೇಕು.
ಲಾಡ್ಜ್ ರೆಸಾರ್ಟ, ಹೋಮ್ ಸ್ಟೇಗಳಿಗೆ ಆಗಮಿಸುವ ಪ್ರವಾಸಿಗರ ಮಾಹಿತಿಯನ್ನು ಮಾಲಕರು ಹಾಘು ಸಾರ್ವಜನಿಕರೂ ಸಹ ಪೊಲಿಸ್ ಠಾಣೆ ( 08284-230363 (ಗ್ರಾಮೀಣ), 231333 (ನಗರ) ) ಸರಕಾರಿ ಆಸ್ಪತ್ರೆ (08284-231330)ಅಥವಾ ತಹಶೀಲ್ದಾರ ಕಾರ್ಯಾಲಯಕ್ಕೆ ಮಾಹಿತಿ ನೀಡಬೇಕೆಂದು ತಹಶೀಲ್ದಾರ ಶೈಲೇಶ ಪರಮಾನಂದ ಲಿಖಿತ ಪ್ರಕಟಣೆ ನೀಡಿದ್ದಾರೆ.

Exit mobile version