Site icon ಒಡನಾಡಿ

ದಾಂಡೇಲಿಯಲ್ಲಿ ಎರಡು, ಹಳಿಯಾಳದಲ್ಲಿ ಒಂದು ಕೊರೊನಾ ಕೇಸ್…

ದಾಂಡೇಲಿ: ದಾಂಡೇಲಿ, ಹಳಿಯಾಳದಲ್ಲಿ ಇದೀಗ ಮಹಾರಾಷ್ಟ್ರ ಸಂಪರ್ಕದಿಂದಾಗಿ ಕೊರೊನಾ ಸೋಂಕು ಅಂಟಿಕೊಂಡಿದ್ದು, ಗುರುವಾರ ದಾಂಡೇಲಿಯ ಇಬ್ಬರು ಯುವಕರು, ಹಳಿಯಾಳದ ಒರ್ವ ಮಹಿಳೆಯಲ್ಲಿ ಕೊರೊನಾ ಸೋಂಕು ದೃಢವಾಗಿದೆ.

ದಾಂಡೇಲಿಯ ಇಬ್ಬರು ಯುವಕರು ಪುಣಾದಿಂದ ಜೂನ್‌ 7 ಕ್ಕೆ ದಾಂಡೇಲಿಗಾಗಮಿಸಿದ್ದು. ನೇರವಾಗಿ ಸಾಂಸ್ಥಿಕ ಕ್ವಾರೆಂಟೈನ್‌ ಒಳಗಾಗಿದ್ದ ಇವರ ಗಂಟಲು ದ್ರವ ಪರೀಕ್ಷೆಗೆ ಕಲೂಹಿಸಲಾಗಿತ್ತು. ಗುರುವಾರ ಅದು ಪಾಸಿಟಿವ್‌ ಎಂದು ಬಂದಿದ್ದು, ಇವರಿಬ್ಬರಲ್ಲಿಯೂ ಕೊರೊನಾ ಸೋಂಕು ದೃಢವಾಗಿದೆ. ಓರ್ವ ಮಾರುತಿನಗರದ 34 ವರ್ಷದ ಯುವಕನಾಗಿದ್ದು, ಮತ್ತೋರ್ವ ಟೌನ್‌ಶಿಪ್‌ನ 28 ವರ್ಷದ ಯುವಕನಾಗಿದ್ದಾನೆ. ದಾಂಡೇಲಿ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರನ್ನು ಕಾರವಾರ ಕಿಮ್ಸ್‌ಗೆ ಸಾಗಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಸೊಂಕಿತರು ಪುಣಾದಿಂದ ದಾಂಡೇಲಿಗೆ ಆಗಮಿಸುವಾಗ ಅಳ್ನಾವರಕ್ಕೆ ಬಂದು ಅಲ್ಲಿಂದ ಖಾಸಗಿ ವಾಹನದಲ್ಲಿ ದಾಂಡೇಲಿಗೆ ಬಂದಿದ್ದರು. ಇದೀಗ ಆ ಖಾಸಗಿ ವಾಹನ ಚಾಲಕನನ್ನೂ ಕ್ವಾರೆಂಟೈನ್‌ಗೆ ಒಳಪಡಿಸಲಾಗಿದೆ ಎಂದು ತಿಳಿದು ಬಂದಿದೆ.

ಇನ್ನು ಹಳಿಯಾಳದಲ್ಲಿ 28 ವಷದ ಮಹಿಳಿಗೆ ಸೋಂಕು ಧೃಢವಾಗಿದೆ. ಇವರು ಲಾಕ್‌ಡೌನ್‌ ಪೂರ್ವ ಮಹಾರಾಷ್ಟ್ರಕ್ಕೆ ಹೋಗಿದ್ದರು. ಜೂನ 2 ರಂದು ಮರಳಿದ್ದರು. ಅಲ್ಲಿಂದ ಏಳು ದಿನಗಳ ಕ್ವಾರೆಂಟೈನ್‌ ಮುಗಿಸಿ ಜೂನ್‌ 9 ಕ್ಕೆ ಮನೆ ಸೇರಿದ್ದರು. ಗುರುವಾರ ಅವರ ಗಂಟಲು ದ್ರವದ ಪರೀಕ್ಷಾ ವರದಿ ಪಾಸಿಟಿವ್‌ ಎಂದು ಬಂದಿದೆ. ಇವರನ್ಣೂ ಸಹ ಹಳಿಯಾಳ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈಕೆಯ ಸಂಪರ್ಕದಲ್ಲಿದ್ದ ಸುಮಾರು 10 ಜನರನ್ನು ಕ್ವಾರೆಂಟೈನ್‌ ಮಾಡಲಾಗಿದೆ.

Exit mobile version