ದಾಂಡೇಲಿ: ನಗರದಲ್ಲಿ ಕೊರೊನಾದಿಂದ ಸಂಕಷ್ಟಕ್ಕೊಳಗಾದ ವಿವಿಧ ಸ್ಥಳಗಳ ಜನರಿಗೆ ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಘೋಟ್ನೇಕರವರು ಆಹಾರ ಧಾನ್ಯಗಳ ಕಿಟ್ ಹಾಗೂ ತರಕಾರಿ ವಿತರಿಸಿದರು.
ಆಟೋ ರಿಕ್ಷಾ , ಗೂಡ್ಸ್ ರಿಕ್ಷಾ ಚಾಲಕರು, ಲಾರಿ ಚಾಲಕರು, ಸವಿತಾ ಸಮಾಜದವರು, ದ್ವಿಚಕ್ರವಾಹನ ಹಾಗೂ ಇನ್ನಿತರೆ ವಾಹನಗಳ ಮೆಕಾನಿಕಲ್‍ಗಳಿಗೆ ಹಾಗೂ ಕಾಗದ ಕಂಪನಿಯೊಳಗೆ ಸ್ವಚ್ಚತಾ ಕಾರ್ಯ ಮಾಡುವವರಿಗೆ, ಬಡ ಮಹಿಳೆಯರೂ, ಪೂಜಾರಿಗಳಿಗೂ, ಕಾರ್ಮಿಕರಿಗೂ ಸೇರಿ ಹಲವು ಶ್ರಮ ಜೀವಿಗಳಿಗೆ ಆಹಾರದ ಕಿಟ್ ವಿತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಕೊರೊನಾದಿಂದ ಎಲ್ಲ ದುಡಿಯುವ ವರ್ಗದವರೂ ಸಹ ಸಂಕಷ್ಠಕ್ಕೊಳಗಾಗಿದ್ದಾರೆ. ಇದೊಂದು ಅಪಾಯಕಾರಿ ರೋಗವಾಗಿದ್ದು ಇದರಿಂದ ಮೂಜಾಗೃತೆ ವಹಿಸಲು ಎಲ್ಲರೂ ಸರಕಾರದ ನಿಯಮಗಳನ್ನು ಪಾಲಿಸಬೇಕು ಎಂದರು.
ಇದರ ಜೊತೆಗೆ ಆಲೂರು, ಕೋಗಿಲಬನ, ಜನತಾ ಕಾಲನಿ, ಅಂಬೇವಾಡಿ ನಾನಾ ಕೆಸರೊಡಗಾ ಸೇರಿದಂತೆ ಹಲವು ಗ್ರಾಮೀಣ ಪ್ರದೇಶದ ಜನರಿಗೂ ಘೋಟ್ನೇಕರ್ ಆಹಾರದ ಕೊಟ್ ವಿತರಿಸಿದರು.
ಈ ಸಂದರ್ಭದಲ್ಲಿ ಎ.ಪಿ.ಎಮ್.ಸಿ. ಅಧ್ಯಕ್ಷ ಶ್ರೀನಿವಾಸ ಘೋಟ್ನೇಕರ ಜಿ.ಪಂ. ಮಾಜಿ ಸದಸ್ಯ ವಾಮನ ಮಿರಾಶಿ, ದಾಂಡೇಲಪ್ಪ ಬ್ಯಾಂಕ್‍ನ ಮುಖ್ಯ ಕಾರ್ಯ ನಿರ್ವಾಹಕ ಕೃಷ್ಣಾ ಪೂಜಾರಿ ಮುಂತಾದವರು ಜೊತೆಗಿದ್ದರು. ಮುಂತಾದವರಿದ್ದರು.